ಎಸ್ಸೆಸ್ಸೆಫ್ ಕಾಟಿಪಳ್ಳ ಸೆಕ್ಟರ್ ಇದರ ವಾರ್ಷಿಕ ಕೌನ್ಸಿಲ್, ( ಮಹಾಸಭೆ) ದಿನಾಂಕ 27/12/20 ರಂದು ರಾತ್ರಿ 8:30 ಘಂಟೆಗೆ ಸುನ್ನೀ ಸೆಂಟರ್ ಕಾಟಿಪಳ್ಳದಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ದಾವುದ್ ಹಕೀಂ ಸಖಾಫಿ ಕಾಟಿಪಳ್ಳ, ರವರು ದುವಾ ನಡೆಸಿದರು. ಕೆಸಿಎಫ್ ಫಾರೂಖ್ ಕಾಟಿಪಳ್ಳ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಝರುದ್ದೀನ್ 9ನೇ ಬ್ಲಾಕ್, ರವರು ಸ್ವಾಗತ ಹಾಗೂ ವಾರ್ಷಿಕ ವರದಿ ವಾಚಿಸಿದರು. ಸೆಕ್ಟರ್ ಕೋಶಾಧಿಕಾರಿ ಹನೀಫ್ ಕೋಟೆ ರವರ ಬದಲಿಗೆ ಖಲಂದರ್ ಸೂರಿಂಜೆ ರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. SSF ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷರಾದ ದಾವುದ್ ಹಕೀಂ ಸಖಾಫಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.
SSF ಸುರತ್ಕಲ್ ಡಿವಿಷನ್ ನಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸಿನಾನ್ ಸಖಾಫಿ 3ನೇ ಬ್ಲಾಕ್, ಹೈದರ್ 4ನೇ ಬ್ಲಾಕ್ ಹಾಗೂ ಸುರತ್ಕಲ್ ಡಿವಿಷನ್ ಉಪಾಧ್ಯಕ್ಷರು ಹನೀಫ್ ಅಹ್ಸನಿ, ರವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. SSF ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಸಖಾಫಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು.
ಬಳಿಕ ಹಳೆ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರು: ಅಫ್ಫಾನ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ನಝರುದ್ದೀನ್ 9ನೇ ಬ್ಲಾಕ್, ಕೋಶಾಧಿಕಾರಿ: ನೌಫಲ್ 9ನೇ ಬ್ಲಾಕ್, ಉಪಾಧ್ಯಕ್ಷರು : ಹನೀಫ್ ಕೋಟೆ, ಕಾರ್ಯದರ್ಶಿಗಳು:ಇಕ್ಬಾಲ್ ಕಾಟಿಪಳ್ಳ, ಅಬ್ಝಲ್ ಸೂರಿಂಜೆ, ಖಲೀಲ್ 4ನೇ ಬ್ಲಾಕ್, ತ್ವಲ್ಹತ್ 4ನೇ ಬ್ಲಾಕ್, ಸವಾಝ್ ಕಾಟಿಪಳ್ಳ ಹಾಗೂ21 ಕಾರ್ಯಾಕಾರಿಣಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
ಬಳಿಕ ನೂತನ ಸಮಿತಿಗೆ ಧ್ವಜ ಮತ್ತು ಕಡತಗಳನ್ನು ಹಸ್ತಾಂತರಿಸಲಾಯಿತು.ನೂತನ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿಯವರು ಧನ್ಯವಾದಗಳನ್ನು ಅರ್ಪಿಸಿ, ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.