ಸುನ್ನೀ ಯುವ ಜನ ಸಂಘ (SYS) ಮೂಡಬಿದ್ರೆ ಸೆಂಟರ್ ಇದರ ಅಧೀನದಲ್ಲಿರುವ SYS ಗುಂಡುಕಲ್ಲು ಬ್ರಾಂಚ್ ಇದರ ವಾರ್ಷಿಕ ಕೌನ್ಸಿಲ್ 2020-21 ಮಸ್ಜಿದುಲ್ ಅನ್ಸ್ವಾರ್ ನಲ್ಲಿ ನಡೆಯಿತು.
ಅಬ್ದುಲ್ ಸಲಾಂ ಮದನಿ ಗುಂಡುಕಲ್ಲು ರವರ ಸಭಾಧ್ಯಕ್ಷತೆಯಲ್ಲಿ ಅಬ್ದುಲ್ ಅಝೀಝ್ ಸಅದಿ ಗುಂಡುಕಲ್ಲು ಉದ್ಘಾಟಿಸಿದರು.ಅಬ್ದುಲ್ ಖಾದರ್ ಗುಂಡುಕಲ್ಲು ವಿಷಯ ಮಂಡನೆ ಹಾಗೂ 2019-20ನೇ ವಾರ್ಷಿಕ ವರದಿ,ಲೆಕ್ಕ ಪತ್ರ ಮಂಡಿಸಿದರು. ನೂತನ ಸದಸ್ಯರನ್ನು ಸಮಿತಿಗೆ ಸೇರ್ಪಡಿಸಲಾಯಿತು.