ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಇಪ್ಪತ್ತನೆಯ ವಾರ್ಷಿಕದ ಅಂಗವಾಗಿ ಹಮ್ಮಿಕೊಂಡಿರುವ “ಮಾರ್ಕ್-20” ಅಭಿಯಾನದ ಭಾಗವಾಗಿರುವ “ಸ್ಮಾರ್ಟ್ ಕ್ಯಾಂಪಸ್” ಯೋಜನೆಯ ಶಿಲಾನ್ಯಸವನ್ನು ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅವರು ನಿರ್ವಹಿಸಿದರು. ಸಂಸ್ಥೆಯ ರಸ್ತೆಯ ಹಾಗೂ ಅಂಗಳದ ಇಂಟರ್ ಲಾಕ್,ಪ್ರವೇಶ ಕವಾಟ, ಗೇಟ್, ಹಾಗೂ ಕ್ಯಾಂಪಸ್ ನವೀಕರಣದ ವಿವಿಧ ಯೋಜನೆಗಳನ್ನು ಹೊಂದಿರುವ ಸ್ಮಾರ್ಟ್ ಕ್ಯಾಂಪಸ್ ಇಪ್ಪತ್ತನೆಯ ವಾರ್ಷಿಕದ ಪ್ರಮುಖ ಕಾರ್ಯಕ್ರಮವಾಗಲಿದೆ.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಕಾರ್ಯಾಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಯಡ್ಕ,ಕೋಶಾಧಿಕಾರಿ ಹಾಜಿ ಎಸ್ ಎಂ ಅಹ್ಮದ್ ಬಶೀರ್,ಸಹಕಾರ್ಯದರ್ಶಿ ಕರೀಂ ಹಾಜಿ ಚೆನ್ನಾರ್, ಸಂಚಾಲಕ ಅಡ್ವಕೇಟ್ ಶಾಕಿರ್ ಹಾಜಿ ಪುತ್ತೂರು,ಸದಸ್ಯರಾದ ಬದ್ರುದ್ದೀನ್ ಹಾಜಿ ಅಳಕೆಮಜಲ್ ಮುಂತಾದವರು ಉಪಸ್ಥಿತರಿದ್ದರು. ಮೆನೇಜರ್ ಬಿಕೆ ರಶೀದ್ ಸ್ವಾಗತಿಸಿದರು.
ಇನ್ನಷ್ಟು ಸುದ್ದಿಗಳು
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಅಲ್ ಅಮೀನ್ ಯೂತ್ ಸೆಂಟರ್: ಯಶಸ್ವಿ ರಕ್ತದಾನ ಶಿಬಿರ
ಪಂಡಿತ್ ಹೌಸ್: ಅಪಾರ್ಟ್ ಮೆಂಟ್ ನಿಂದ ರಸ್ತೆ ಬದಿಗೆ ಕೊಳಚೆ ನೀರು- ಸ್ಥಳೀಯರಿಂದ ಪುರಸಭೆಗೆ ಪತ್ರ
ಸುಳ್ಯ: ಕನಕಮಜಲು, ಪೈಚಾರಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ- ಯಶಸ್ವಿಗೆ ಕರೆ
ಸಯ್ಯಿದ್ ಗುಲ್ಝಾರೇ ಮಿಲ್ಲತ್ ಇಸ್ಮಾಯಿಲ್ ವಾಸ್ತಿ ಇಂದು ಅಲ್ ಖಾದಿಸಾಕೆ
ಬಿ.ಜೆ.ಎಂ.ಕುಪ್ಪೆಪದವು: ಅಧ್ಯಕ್ಷರಾಗಿ ಸತತ 5 ನೇ ಬಾರಿಗೆ ಕೆ.ಉಮರಬ್ಬ ಆಯ್ಕೆ
ಎಸ್ಕೆಎಸ್ಸೆಸ್ಸೆಫ್ ಮುನ್ನಡೆ ಯಾತ್ರೆ: ಸ್ವೀಕಾರ ಸಮಾರಂಭ ಯಶಸ್ವಿಗೊಳಿಸಲು ಕರೆ