janadhvani

Kannada Online News Paper

ಗಾಂಧಿ ಜಯಂತಿ ಅಂಗವಾಗಿ ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿಯಿಂದ ಶ್ರಮದಾನ

ಸಂಪಾಜೆ, ಅಕ್ಟೋಬರ್,03: ಸಂಪಾಜೆ ಮಸೀದಿ ಬಳಿಯಿಂದ ಸಂಪಾಜೆ ಹೈಸ್ಕೂಲ್ ಸಂಪರ್ಕಿಸುವ ರಸ್ತೆಯು ತುಂಬಾ ಹದಗೆಟ್ಟು ಸಂಚಾರಕ್ಕೆ ಬಹಳ ಪ್ರಯಾಸಪಡುತ್ತಿದ್ದು ಇದನ್ನು ಮನಗೊಂಡು SDPI ಸಂಪಾಜೆ ವಲಯದ ಸದಸ್ಯರು ಈ ರಸ್ತೆಯನ್ನು ಶ್ರಮದಾನದ ಮೂಲಕ ಸಂಪಾಜೆ ವಲಯ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ರವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು

ಹಾಗೆಯೇ ಸಂಪಾಜೆ ಮಸೀದಿ ಬಳಿ ಇರುವ ಬಸ್ಸು ತಂಗುದಾಣದ ಸುತ್ತ ಗಿಡ ನೆಡುವ ಮೂಲಕ ಮಾದರಿ ಕಾರ್ಯಕ್ರಮ ನಡೆಸಲಾಯಿತು.

ಸಂಪಾಜೆ ವಲಯ ಕಾರ್ಯದರ್ಶಿ
ಜಹೀರ್ ಕೊಯನಾಡು ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಿಯಾಜ್ ಎಸ್. ಎಂ ಸಮೀರ್ ಗೂನಡ್ಕ,ಸಲೀಂ ಮಲಿಕ್,ರಜಾಕ್ ಸಂಪಾಜೆ,ನಜೀಮ್ ಸಂಪಾಜೆ,
ಅಝೀಝ್ ಸಂಪಾಜೆ,ಉಮ್ಮರ್ ಚಟ್ಟೆಕಲ್ಲು,ಸಫ್ವಾನ್,ಅಶ್ರಫ್ ನೆಲ್ಲಿಕುಮೇರಿ,ಶಾಕಿರ್ ಗುಡ್ಡೆ,ಹ್ಯಾರಿಸ್ ಸಿ ಕೆ,ಹಾಸಿ ಚಟ್ಟೆ ಕಲ್ಲು ಸೇರಿದಂತೆ ಹಲವಾರು ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

error: Content is protected !! Not allowed copy content from janadhvani.com