janadhvani

Kannada Online News Paper

ಕುಪ್ಪೆಪದವು: ಖಾಝಿ ಬೇಕಲ್ ಉಸ್ತಾದರ ಅನುಸ್ಮರಣಾ ಸಂಗಮ

ಕುಪ್ಪೆಪದವು: ಪಾಂಡಿತ್ಯ ಲೋಕದ ಸೌರಭರೂ ,ಪ್ರಮುಖ ವಿದ್ವಾಂಸರೂ, ಖಾಝಿಯೂ, ಕುಪ್ಪೆಪದವು ನವೀಕೃತ ಮಸೀದಿ ನಿರ್ಮಾಣದ ಗೌರವಾಧ್ಯಕ್ಷರೂ ಆಗಿದ್ದ ಶೈಖುನಾ ಖಾಝಿ ಬೇಕಲ್ ಉಸ್ತಾದರ ಅನುಸ್ಮರಣಾ ಸಂಗಮ ಹಾಗೂ ಪ್ರಾರ್ಥನಾ ಮಜ್ಲಿಸ್ ಸ್ಥಳಿಯ ಖತೀಬರಾದ ಕೆ,ಎಚ್,ಯು ಅಬೂಝೈದ್ ಶಾಫಿ ಮದನಿ ಕರಾಯರವರ ನೇತೃತ್ವದಲ್ಲಿ ಜರುಗಿತು.

ಬೇಕಲ್ ಉಸ್ತಾದರು ತೋರಿಸಿದ ನೈಜ್ಯ ಹಾದಿಯಲ್ಲಿ ನಡೆಯುವ ಮೂಲಕ ಅವರ ಆದರ್ಶತೆಯನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು‌.

ಕಾರ್ಯಕ್ರಮದಲ್ಲಿ ಜಮಾ‌ಅತ್ ಅಧ್ಯಕ್ಷರಾದ ಕೆ ಎಲ್ ಉಮರಬ್ಬ ,ಉಪಾಧ್ಯಕ್ಷರಾದ ರಝಾಖ್ ಹಾಜಿ ಬ್ಲೂಸ್ಟಾರ್, ಪ್ರಧಾನ ಕಾರ್ಯದರ್ಶಿ ರಫೀಖ್ ಆಚರಿಜೋರ, ಕೋಶಾಧಿಕಾರಿ ಉಸ್ಮಾನ್ ಮುರ,ಆಡಳಿತ ಸಮಿತಿ ಸದಸ್ಯರಾದ ಅಬ್ದುರ್ರಝಾಖ್ ಪದವಿನಂಗಡಿ,ಅಬ್ದುಲ್ ಲತೀಫ್ ಆಚರಿಜೋರ ,ಇಸ್ಮಾಯಿಲ್ ಶರೀಫ್, ಮುಹಮ್ಮದ್ ಶರೀಫ್ ಕಜೆ,ಅಬೂಬಕರ್ ಪಡಿಲ್‌ಪದವು,ಇಬ್ರಾಹಿಂ ಹಾಜಿ,ಸಹಾಯಕ ಇಮಾಮರಾದ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಮಮಿ ಪೆರಾಳ ,ಬಶೀರ್ ಮುಸ್ಲಿಯಾರ್ ಆಚರಿಜೋರ, ಹಾಗೂ ಜಮಾ‌ಅತ್ತಿನ ಸರ್ವ ಸದಸ್ಯರು ಹಾಗು ಇನ್ನಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com