janadhvani

Kannada Online News Paper

ಹಿರಿಯ ಧಾರ್ಮಿಕ ವಿದ್ವಾಂಸ ಹಾಜಿ ಪಿ.ಕೆ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕಿನ್ಯಾ ವಫಾತ್

ಉಳ್ಳಾಲ: ಹಿರಿಯ ಧಾರ್ಮಿಕ ವಿದ್ವಾಂಸ ಹಾಜಿ ಪಿ. ಕೆ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (70) ಕಿನ್ಯಾ ವಫಾತ್. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಇಂದು ಮಧ್ಯಾಹ್ನ ನಮ್ಮನ್ನಗಲಿದ್ದಾರೆ.

ಅವರು ಅರಸಿನಮಕ್ಕಿ, ಬಜ್ಪೆ, ಕಾಸರಗೋಡು, ಮಣಿಪಾಲ ಮುಂತಾದಕಡೆಗಳಲ್ಲಿ ದೀರ್ಘ ಕಾಲ ಖತೀಬರಾಗಿ ಸೇವೆ ಗೈದಿದ್ದರು.

ಇಂದು ಸಂಜೆ ಕಿನ್ಯಾ ಕೇಂದ್ರ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ.

ಅಪಾರ ಬಂಧು ಮಿತ್ರರನ್ನು ಅಗಲಿದ ಅವರ ಪಾರತ್ರಿಕ ಮೋಕ್ಷಕ್ಕಾಗಿ ಪ್ರತ್ಯೇಕ ದುಆ ನಡೆಸುವಂತೆ ಮಕ್ಕಳಾದ ಬಶೀರ್ ಅಹ್ಮದ್, ಮಸ್ಊದ್ ಅಲಿ, ಸಈದ್, ಅಸ್ಲಂ ಫೈಝಿ, ಅಳಿಯಂದಿರಾದ ಹಮೀದ್ ಮದನಿ ಕುಂತೂರು, ಶರಫುದ್ದೀನ್ ಉಕ್ಕುಡ, ಅಬ್ದುಲ್ಲಾಹ್ ರಹ್ಮಾನಿ ಬಾಂಬಿಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com