janadhvani

Kannada Online News Paper

ಕರ್ನಾಟಕದಿಂದ ಕೇರಳ ಪ್ರವೇಶಕ್ಕೆ ಪಾಸ್: ರದ್ದು ಪಡಿಸುವಂತೆ ಕೇರಳ ಸಚಿವರಿಗೆ ಮನವಿ

ಪುತ್ತೂರು, ಆಗಸ್ಟ್ 17:ಕರ್ನಾಟಕದ ಗಡಿ ಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಹಲವರು ಕೇರಳ ರಾಜ್ಯವಾದ ಕಾಸರಗೋಡು ಜಿಲ್ಲೆಯಲ್ಲಿ ನಿತ್ಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ದಿನಂಪ್ರತಿ ಕಾಸರಗೋಡಿನಿಂದ ತಮ್ಮ ಊರಾದ ಕರ್ನಾಟಕ್ಕೆ ಬಂದು ಮರುದಿನ ಕೆಲಸ ಕಾರ್ಯಗಳಿಗೆ ಕಾಸರಗೋಡು ಹೋಗುತ್ತಾರೆ. ಆದರೆ ಕೋವಿಡ್ 19 ಸಮಸ್ಯೆಯಿಂದ ಕೇರಳ ರಾಜ್ಯ ಪ್ರವೇಶಿಸಬೇಕಾದರೆ ಪಾಸ್‌ನ ಅಗತ್ಯತೆ ಇದ್ದು ನಿರಂತರ ಬಂದು ಹೋಗಲು ಪಾಸ್ ದೊರಯದೆ ಹಲವಾರು ವ್ಯಾಪಾರಸ್ಥರು ಮತ್ತು ಕೂಲಿಕಾರ್ಮಿಕರು ಬಹಳಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಈ ಬಗ್ಗೆ SDPI ಗೋಳಿತ್ತಡಿ ಬ್ರಾಂಚ್ ಕಾರ್ಯದರ್ಶಿ ಇಮ್ತಿಯಾಜ್ ಕೊಟ್ಯಾಡಿ ಅವರು ಕೇರಳದ Revenue & Housing ಸಚಿವರಾದ ಮಾನ್ಯ ಇ.ಚಂದ್ರಶೇಖರನ್ ರವರನ್ನು ಭೇಟಿಯಾಗಿ ಗಡಿ ಪ್ರದೇಶದ ಜನರು ಕೇರಳ ಪ್ರವೇಶಿಲು ಬೇಕಾಗಿರುವ ಪಾಸನ್ನು ರದ್ದುಗೊಳಿಸಬೇಕೆಂದು ಮನವಿ ನೀಡಿದರು. ಮನವಿ ಸ್ವೀಕರಿಸಿದ ಸಚಿವರು ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆ ಭರವಸೆ ನೀಡಿರುತ್ತಾರೆ.

error: Content is protected !! Not allowed copy content from janadhvani.com