janadhvani

Kannada Online News Paper

ಕೈರಂಗಳ:ಅಲ್-ಅಮೀನ್ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಡಿ.ಜಿ ಕಟ್ಟೆಯ ಸಂಸ್ಥೆಯ ಕಛೇರಿ ಮುಂಭಾಗದಲ್ಲಿ ಆಚರಿಸಲಾಯಿತು.

ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಇವರು ಧ್ವಜಾರೋಹಣ ನೇರವೇರಿಸಿ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಮಾತನಾಡಿದರು.ತೋಟಾಲ್ ಜುಮಾ ಮಸೀದಿ ಖತೀಬರಾದ ಮುಹಿಯ್ಯದ್ದೀನ್ ಸಹದಿ ತೋಟಾಲ್ ದುವಾ ನೆರವೇರಿಸಿ ಸಂದೇಶ ಭಾಷಣಗೈದರು.ಕೊಣಾಜೆ ಪೋಲೀಸ್ ಠಾಣಾ ವ್ರತ್ತಾಧಿಕಾರಿ ಮಧುಸೂದನ್ ಸರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಸ್ವಾತಂತ್ರ್ಯದ ಕಿಚ್ಚು ನಮ್ಮಲ್ಲಿ ಎಂದೂ ಇರಬೇಕು,ಹಲವಾರು ಜಾತಿ,ಮತ,ಧರ್ಮ,ಬಣ್ಣ ಗಳಲ್ಲಿ ಗುರುತಿಸಿರುವ ನಾವೆಲ್ಲರೂ ಭಾರತೀಯತೆಯನ್ನು ಉಳಿಸಿಕೊಳ್ಳಬೇಕು ಎಂದು ಸ್ವಾತಂತ್ಯದ ಸಂದೇಶ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತೋಟಾಲ್ ಮಸೀದಿ ಮುಅಲ್ಲಿಂ ಹಮೀದ್ ಮುಸ್ಲಿಯಾರ್,ಹಸನ್ ಮುಸ್ಲಿಯಾರ್,ಹಿರಿಯರಾದ ಅಹ್ಮದ್ ಕುಂಙಿ,ಅಲ್-ಅಮೀನ್ ನಿರ್ದೇಶಕರು ಇಕ್ಬಾಲ್ ಕೈರಂಗಳ,SSF ಅಧ್ಯಕ್ಷರಾದ ಅಬ್ಬಾಸ್ ವಿದ್ಯಾನಗರ,ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಶಿನಾನ್ ಸುಟ್ಟ ಸ್ವಾಗತಿಸಿ,ವಂದಿಸಿದರು.

error: Content is protected !! Not allowed copy content from janadhvani.com