janadhvani

Kannada Online News Paper

ತಾಜುಲ್ ಉಲಮಾ ಚಾರಿಟಿ ಸೇವೆಗೆ ಮುಲ್ಕಿ ವಲಯ ಮಟ್ಟದಲ್ಲಿ ಚಾಲನೆ

ಮುಲ್ಕಿ ವಲಯ ಮಟ್ಟದ ಎಸ್ ವೈ ಎಸ್,ಎಸ್ಸೆಸ್ಸೆಪ್, ಹಾಗೂ ಗಲ್ಫ್ ನಲ್ಲಿರುವ ಕೆಸಿಎಪ್ ಸದಸ್ಯರ ತಾಜುಲ್ ಉಲಮಾ ರಿಲೀಫ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಳೆದ ಕೆಲವೊಂದು ವರ್ಷಗಳಿಂದ ಪಕ್ಷಿಕೆರೆ- ಕಿನ್ನಿಗೋಳಿ ಪರಿಸರದಲ್ಲಿ ಬಡ-ನಿರ್ಗತಿಕ ಕುಟುಂಬದ ಆಸರೆಯಾಗಿ ಕಾರ್ಯಾಚರಿಸುತಿದ್ದು ಇದೀಗ ತನ್ನ ‌ಕಾರ್ಯ ವ್ಯಾಪ್ತಿಯನ್ನು ‌ಮುಲ್ಕಿ ವಲಯ ಮಟ್ಟಕ್ಕೆ ‌ವಿಸ್ತರಿಸಿದ್ದು.

ಪರಿಸರದ ಬಡ-ನಿರ್ಗತಿಕ ಕುಟುಂಬಗಳಿಗೆ ಮಾಸಿಕ ರೇಶನ್ ಕೊಡುವ ಯೋಜನೆಯನ್ನು ಹಾಕಿಕೊಂಡಿದ್ದು ಇದರ ಅಧಿಕೃತ ಉದ್ಘಾಟನಾ ಸಮಾರಂಭವನ್ನು ಆಪತ್ಬಾಂದವ ಆಸಿಫ್ ಪಡುಬಿದ್ರೆರವರ ಮಂದ ಹಾಗೂ ಬುದ್ಧಿಮಾಂದ್ಯ ಮತ್ತು ವೃದ್ಧರ ಆಶ್ರಮವಾದ ಮೈಮೂನಾ ಫೌಂಡೇಶನ್ ಗೆ ಬೋಜನ ಹಾಗೂ ಸುಮಾರು ಹತ್ತು ಸಾವಿರ ಬೆಲೆಬಾಳುವ ಆಹಾರ ಸಾಮಗ್ರಿಗಳನ್ನು ಕೊಡುವ ಮೂಲಕ ಉದ್ಘಾಟನೆ‌ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ ರಿಲೀಫ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಅದ್ಯಕ್ಷ ರಾದ ಝೈನುದ್ದೀನ್ ಹಾಜಿ, ಪ್ರ. ಕಾರ್ಯದರ್ಶಿ ಪಿಎಂಎ ಅಶ್ರಫ್ ರಝಾ ಅಂಜದಿ, ಕೋಶಾಧಿಕಾರಿ ಸಿದ್ದೀಕ್ ಪುನರೂರು, ಎಸ್ ವೈ ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಕಿನ್ನಿಗೋಳಿ, ಎಸ್ಸೆಸ್ಸೆಫ್ ಮುಲ್ಕಿ ಸೆಕ್ಟರ್ ಅಧ್ಯಕ್ಷರಾದ ಶಂಸುದ್ದೀನ್ ಅಹ್ಸನಿ ಬಲ್ಕುಂಜೆ ಹಾಗೂ ಸದಸ್ಯರಾದ ಸುಲೈಮಾನ್ ಪಕ್ಷಿಕೆರೆ, ನಯಾಝ್ ಕಾಪಿಕಾಡ್, ಬಶೀರ್ ಕಾರ್ನಾಡ್ ,ಬಾವಾಕ ಹೆಜಮಾಡಿ, ಅಬ್ದುರ್ರಹ್ಮಾನ್ ಗುತ್ತಕಾಡು,ನಗರ ಸಭೆ ಸದಸ್ಯರಾದ ಪುತ್ತುಬಾವ, ಆಪತ್ಬಾದವ ಆಸಿಫ್, ಪತ್ರಕರ್ತರಾದ ಅದ್ದಿ ಬೊಳ್ಳೂರು ಇನ್ನಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com