ಉಸ್ತುವಾರಿ ಇಕ್ಬಾಲ್ ಬಾಳಿಲ ,ಚೇರ್ಮನ್ ಅಬ್ದುಲ್ ಸಮದ್ ಸಾಲೆತ್ತೂರು,ಹಾಗೂ ಕನ್ವೀನರ್ ಆಗಿ ಸಲಾಂ ಅಡ್ಡೂರು ಆಯ್ಕೆಮಂಗಳೂರು: ಎಸ್ಕೆಎಸ್ಸೆಸ್ಸೆಫ್ ಶೈಕ್ಷಣಿಕ ಕ್ಷೇತ್ರದ ಟ್ರೆಂಡ್ ಜಿಲ್ಲಾ ಸಮಿತಿಯ ರಚನೆ ಹಾಗೂ ಮಾಹಿತಿ ಕಾರ್ಯಗಾರವು ಇತ್ತೀಚೆಗೆ ಪಾಣೆಮಂಗಳೂರಿನ ಎಸ್ಸ್ ಎಸ್ಸ್ ಆಡಿಟೋರಿಯಂನಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಅಮೀರ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಆರಿಫ್ ಬಡಕಬೈಲು,ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಬಾಳಿಲ, ಟ್ರೆಂಡ್ ರಾಜ್ಯ ತರಬೇತುದಾರ ಅಬ್ದುಲ್ ಸಮದ್ ಸಾಲೆತ್ತೂರು ವಿಷಯ ಮಂಡಿಸಿದರು. ಮುಂದಿನ ಒಂದು ವರ್ಷದ ಶೈಕ್ಷಣಿಕ ಯೋಜನೆಗಳ ಬಗ್ಗೆ ವಿಚಾರವಿನಿಮಯ ನಡೆಸಲಾಯಿತು . ಜಿಲ್ಲಾ ಟ್ರೆಂಡ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಅಡ್ಡೂರು ಸ್ವಾಗತಿಸಿ ವಂದಿಸಿದರು.
ನಂತರ ಎಸ್ಕೆಎಸ್ಸೆಸ್ಎಫ್ ಟ್ರೆಂಡ್ ದ.ಕ. ಜಿಲ್ಲಾ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಉಸ್ತುವಾರಿಯಾಗಿ ಇಕ್ಬಾಲ್ ಬಾಳಿಲ, ಅಧ್ಯಕ್ಷರಾಗಿ ಅಬ್ದುಲ್ ಸಮದ್ ಸಾಲೆತ್ತೂರು, ಉಪಾಧ್ಯಕ್ಷರಾಗಿ ತೌಸೀಫ್ ಪಾಂಡವರಕಲ್ಲು, ಮತ್ತು ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಅಡ್ಡೂರು, ಜೊತೆಕಾರ್ಯದರ್ಶಿಗಳಾಗಿ ನಬ್ಸೀರ್ ಆಲಾಡಿ, ಸಿದ್ದೀಕ್ ನಾವೂರು ಮತ್ತು ನೌಶಾದ್ ಅನ್ಸಾರಿ, ಕೋಶಾದಿಕಾರಿಯಾಗಿ ಬಶೀರ್ ಯು.ಪಿ.ಬೆಳ್ಳಾರೆ , ವರ್ಕಿಂಗ್ ಸದಸ್ಯರಾಗಿ ಶಫೀಕ್ ಕಟ್ಟತ್ತಿಲ ಮತ್ತು ಅಬ್ದುಲ್ ಖಾದರ್ ಮೊಟ್ಟೆಂಗಾರ್ ಇವರನ್ನು ಆರಿಸಲಾಯಿತು.















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ