janadhvani

Kannada Online News Paper

ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವ್ಯಾಪ್ತಿಯ ಎರಡು ಸ್ಥಳಗಳಲ್ಲಿ ಇಂದು ರಕ್ತದಾನ ಶಿಬಿರ ನಡೆಯಲಿದ್ದು, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇದರ 156ನೇ ಕ್ಯಾಂಪ್ “ರೆಡ್ ಕ್ರಾಸ್ ಸೊಸೈಟಿ, ಹಾಗೂ ಲೇಡಿಗೋಶನ್ ಆಸ್ಪತ್ರೆ ಮಂಗಳೂರು” ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ವಿಟ್ಲ ಹಾಗೂ ಮಂಗಲಪದವು ಸೆಕ್ಟರ್ ವತಿಯಿಂದ “ಸರಕಾರಿ ಆಸ್ಪತ್ರೆ ವಿಟ್ಲ” ದಲ್ಲಿ ನಡೆಯಲಿದೆ.

ಹಾಗೂ ಬ್ಲಡ್ ಸೈಬೋ ಇದರ 157ನೇ ಕ್ಯಾಂಪ್ ಯೇನಪೋಯ ಆಸ್ಪತ್ರೆ, ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ವಿಟ್ಲ ಸೌತ್ ಹಾಗೂ ಕನ್ಯಾನ ಸೆಕ್ಟರ್ ವತಿಯಿಂದ “ಮಹಿಳಾ ಕಾಲೇಜು, ಉಕ್ಕುಡ” ದಲ್ಲಿ ನಡೆಯಲಿದೆ. ಎಂದು ಡಿವಿಷನ್‌ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com