janadhvani

Kannada Online News Paper

ಸಾಲೆತ್ತೂರು, ಕಾಡುಮಠ ವಿಧ್ಯಾರ್ಥಿಯ ಹಲ್ಲೆ: ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಖಂಡನೆ

ಬಿ.ಸಿ.ರೋಡು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಾಲೆತ್ತೂರು ಕಾಡುಮಠ ಎಂಬಲ್ಲಿ ಅಪ್ರಾಪ್ತ ವಿಧ್ಯಾರ್ಥಿ ಮೇಲೆ ಹಲ್ಲೆ ಮತ್ತು ದರೋಡೆ ನಡೆಸಲಾಗಿದ್ದು, ಸಂಘಪರಿವಾರದ ಕಾರ್ಯಕರ್ತರಾದ ದಿನೇಶ್ ಕನ್ಯಾನ ಮತ್ತು ಆತನ ಸಹಚರರು ಈ ಅಮಾನವೀಯ ಕೃತ್ಯದ ಆರೋಪಿಗಳಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ‌ ವೀಡಿಯೋ ವೈರಲ್ ಆಗಿದ್ದು ಇದು ಧರ್ಮ ಸೌಹಾರ್ದತೆಯ ಜಿಲ್ಲೆಯಾದ ದ.ಕನ್ನಡ ಜಿಲ್ಲೆಯಲ್ಲಿ‌ ಕೋಮು ಸಂಘರ್ಷವನ್ನು ಸ್ರಷ್ಟಿಸುವ ಹುನ್ನಾರ ಎಂದು ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.

ಒಂದು ವೇಳೆ ವಿದ್ಯಾರ್ಥಿ ತಪ್ಪು ಮಾಡಿದ್ದೇ ಆದಲ್ಲಿ ಸಮಗ್ರ ತನಿಖೆ ನಡೆಸಿ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕೇ ಹೊರತು, ಈ ಗೂಂಡಾಗಳ ನೈತಿಕ ಪೋಲಿಸ್ ಗಿರಿಯನ್ನು‌ ಜಿಲ್ಲಾ ಎಸ್ಸೆಸ್ಸೆಫ್ ಖಂಡಿಸುತ್ತಿದೆ.

ಈಗಾಗಲೇ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದು ಆರೋಪಿಗಳ ಮೇಲೆ, ಹಲ್ಲೆ, ದರೋಡೆ‌ ಮತ್ತು ಮಾನ ಹರಾಜು ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ಸಂಭಂದಪಟ್ಟ ಪೋಲೀಸ್ ಇಲಾಖೆಯನ್ನು ಆಗ್ರಹಿಸುತ್ತಿದೆ.

error: Content is protected !! Not allowed copy content from janadhvani.com