ಏಳು ತಿಂಗಳ ಮಗುವಿಗೆ ದುಬೈಯಿಂದ ಜೀವರಕ್ಷಕ ಔಷಧಿಯನ್ನು ಬೆಂಗಳೂರಿಗೆ ತಲುಪಿಸಿದ ಎಸ್‌ವೈಎಸ್ ಸಾಂತ್ವನ

ಬೆಂಗಳೂರು: ಬೆಂಗಳೂರಿನಲ್ಲಿರುವ ಏಳು ತಿಂಗಳ ಮಗುವಿಗೆ ದುಬೈಯಿಂದ ಜೀವರಕ್ಷಕ ಔಷಧಿ ತಂದು ಕೊಡುವ ಮೂಲಕ ಎಸ್‌ವೈಎಸ್ ಸಾಂತ್ವನ ತಂಡವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಭಾರತದಲ್ಲೆಲ್ಲೂ ಆ ಔಷಧಿ ಲಭ್ಯವಿಲ್ಲವೆಂದರಿತ ಮಗುವಿನ ಹೆತ್ತವರು ಕಂಗಾಲಾಗಿದ್ದರು.

ರಾಜ್‌ಕುಮಾರ್ -ಕಿರಣ್ ಕುಮಾರಿ ದಂಪತಿಯ ಪುತ್ರ ರಯಾನ್ ಎಂಬ ಏಳು ತಿಂಗಳ ಮಗುವಿಗೆ ಅಪಸ್ಮಾರ ರೋಗಕ್ಕೆ ಎಸ್‌ವೈಎಸ್ ಮೆಡಿಕಲ್ ಎಮರ್ಜೆನ್ಸಿ ಟೀಮ್ ದುಬೈನಿಂದ ಔಷಧಿಯನ್ನು ಸೂಕ್ತ ಸಮಯಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಮೂಲತಃ ಕೊಲ್ಕತ್ತದ ರಾಜ್‌ಕುಮಾರ್ ದಂಪತಿಯು ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದೆ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ ರಾಜ್ ಕುಮಾರ್. ಮೂರ್ಛೆರೋಗ ಬಾಧಿತ ಮಗುವನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಅಗತ್ಯವಾದ fabril 500mg‌ಎಂಬ ಔಷಧಿಯು ಲಾಕ್‌ಡೌನ್ ಕಾರಣದಿಂದಾಗಿ ಕರ್ನಾಟಕದಲ್ಲಿ ಎಲ್ಲಿಯೂ ದೊರೆಯದಾಯಿತು‌.

ಚಿಂತಾಕ್ರಾಂತವಾದ ಕುಟುಂಬಿಕರು ಬೆಂಗಳೂರು ಕೋವಿಡ್ ಸಹಾಯ ಕೇಂದ್ರವನ್ನು ಸಂಪರ್ಕಿಸಿದ್ದರು. ಇಲ್ಲಿಂದ ತ್ರಿಶ್ಶೂರು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದರು. ತ್ರಿಶ್ಶೂರು ಜಿಲ್ಲಾಡಳಿತದ ಸಿಬ್ಬಂದಿಯೊಬ್ಬರು; ಅಗತ್ಯ ತುರ್ತು ಔಷಧಿಗಳನ್ನು ವಿದೇಶಕ್ಕೆ ಸಹಿತ ತಲುಪಿಸಿ ಕೊಡುವ ಎಸ್‌ವೈಎಸ್ ಸಾಂತ್ವನ‌ ತಂಡದ ಸೇವೆಗಳ ಕುರಿತು ರಾಜ್‌ಕುಮಾರ್ ಗೆ ಮಾಹಿತಿ ನೀಡುತ್ತಾರೆ. ಎಸ್‌ವೈಎಸ್ ರಾಜ್ಯ ಸಾಂತ್ವ ಸೆಕ್ರಟರಿ ಎಸ್ ಶರಫುದ್ದೀನ್ ರನ್ನು ಸಂಪರ್ಕಿಸಿದಾಗ; ಔಷಧಿ ತಲುಪಿಸುತ್ತೇನೆಂದು ಭರವಸೆ ನೀಡಿದರು.

ಬಳಿಕ ಎಸ್‌ವೈಎಸ್ ಸಾಂತ್ವ‌ನ ನ್ಯಾಷನಲ್ ಡೆಸ್ಕ್ ಕೋ ಆರ್ಡಿನೇಟರ್ ಶರೀಫ್ ಬೆಂಗಳೂರು, ನಾಗ್ಪುರ, ಪುಣೆ, ದೆಹಲಿ ಮುಂತಾದೆಡೆ ಆ ಔಷಧಿಯ ಲಭ್ಯತೆಯ ಬಗ್ಗೆ ವಿಚಾರಿಸಲಾಯ್ತು. ಎಲ್ಲಿಯೂ ಔಷಧಿ ದಾಸ್ತಾನಿರಲಿಲ್ಲ. ಈ ಸಂದರ್ಭದಲ್ಲಿ ದುಬೈ ಐಸಿಎಫ್, ಆರ್‌ಎಸ್‌ಸಿ ಸಂಘಟನೆಗಳ ಮೂಲಕ ಅಲ್ಲಿ ಲಭ್ಯವಿದೆಯೇ ಎಂದು ವಿಚಾರಿಸಲಾಯ್ತು. ಸಾಂತ್ವನ ಸ್ವಯಂ ಸೇವಕ ರ‌ಈಸ್ ಔಷಧಿ ಖರೀದಿಸಿ ವಿಮಾನ ಮೂಲಕ ಕೊಚ್ಚಿಗೆ ತಲುಪಿಸಿದರು. ಅಲ್ಲಿಂದ ಔಷಧಿಯನ್ನು ಎಸ್‌ವೈಎಸ್ ಸ್ವಯಂ ಸೇವಕರು ಕೇರಳ ಗಡಿ ತಲಪಾಡಿ ಗೆ ತಂದರು‌.

ಮುಂದೆ ಬೆಂಗಳೂರು ಎಸ್‌ವೈಎಸ್ ಕಾರ್ಯದರ್ಶಿ ಇಸ್ಮಾಹಿಲ್ ಸ ಅದಿ ಕಿನ್ಯ ಶ್ರಮದಿಂದ ಬೆಂಗಳೂರಿಗೆ ತಲುಪಿಸಿತು‌. ಬೆಂಗಳೂರು ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಬಶೀರ್ ಸ‌ಅದಿ ಔಷಧಿಯನ್ನು ರಾಜ್ ಕುಮಾರ್ ಗೆ ಹಸ್ತಾಂತರಿಸಿದರು.
ಲಾಕ್‌ಡೌನ್ ಆರಂಭ ವಾದಂದಿನಿಂದ ಎಸ್‌ವೈಎಸ್ ಮೆಡಿಕಲ್ ಎಮೆರ್ಜೆನ್ಸಿ ತಂಡವು ವಿದೇಶದಲ್ಲಿ ಸಂಕಷ್ಟದಲ್ಲಿರುವವರು ಸಹಿತ ನೂರಾರು ಮಂದಿಗೆ ಔಷಧಿ ತಲುಪಿಸಿ ಶ್ಲಾಘನೆಗೆ ಪಾತ್ರವಾಗಿದೆ‌.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!