ವಾಟ್ಸ್ಆ್ಯಪ್ ಕಳೆದ ಬಾರಿ ಸ್ಟೇಟಸ್ ಅವಧಿಯನ್ನು 30 ಸೆಕೆಂಡ್ನಿಂದ 15 ಸೆಕೆಂಡ್ಗೆ ಇಳಿಸಿತ್ತು. ಆದರೀಗ ಮತ್ತೆ 30 ಸೆಕೆಂಡ್ಗೆ ಏರಿಕೆ ಮಾಡುವಲ್ಲಿ ಚಿಂತನೆ ನಡೆಸುತ್ತಿದ್ದು, ಸದ್ಯದಲ್ಲೇ ಸ್ಟೇಟಸ್ ಅವಧಿಯಲ್ಲಿ ಈ ಬದಲಾವಣೆ ಕಾಣಲಿದೆ. ವಾಬೇಟಾಇನ್ಫೋ ನೀಡಿರುವ ಮಾಹಿತಿಯ ಮೇರೆಗೆ ‘ವಾಟ್ಸ್ಆ್ಯಪ್ ಸ್ಟೇಟಸ್ ಅವಧಿಯನ್ನು 30 ಸೆಂಕೆಡ್ಗಳಿಗೆ ಹೆಚ್ಚಿಸಲು ಸಿದ್ಧತೆ ನಡೆಯುತ್ತಿದೆ.
ಆ್ಯಂಡ್ರಾಯ್ಡ್ ಆವೃತ್ತಿ 2.20.166 ಅಪ್ಡೇಟ್ ವರ್ಷನ್ನಲ್ಲಿ ಈ ಫೀಚರ್ ಸಿಗಲಿದೆ‘ ಎಂದು ಹೇಳಿದೆ. ಬ್ಲಾಗ್ ಪೋಸ್ಟ್ ನೀಡಿರುವ ಮಾಹಿತಿ ಮೇರೆಗೆ ‘ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಸ್ಟೇಟಸ್ ಅವಧಿಯನ್ನು ಸದ್ಯದಲ್ಲೇ ಹೆಚ್ಚಿಸಲಿದೆ. ಎಲ್ಲಾ ಬಳಕೆದಾರರಿಗೂ ಅಪ್ಡೇಟ್ ವರ್ಷನ್ ದೊರೆಯಲು ಸ್ವಲ್ಪ ಸಮಯವಕಾಶ ತೆಗೆದುಕೊಳ್ಳಬಹುದು‘ ಎಂದು ತಿಳಿಸಿದೆ.
ಇತ್ತೀಚೆಗೆ ವಾಟ್ಸ್ಆ್ಯಪ್ನಲ್ಲಿ ಫೇಕ್ ನ್ಯೂಸ್ಗಳನ್ನು ಹರಿದಾಡುವುದನ್ನು ನಿಯಂತ್ರಣಕ್ಕೆ ತರಲು ಮತ್ತು ಸರ್ವರ್ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಸ್ಟೇಟಸ್ ಫೀಚರ್ ಅವಧಿಯನ್ನು ಕಡಿಮೆ ಮಾಡಿತ್ತು. 30 ಸೆಕೆಂಡ್ಗೆ ಮೀಸಲಾಗಿದ್ದ ಸ್ಟೇಟಸ್ ಫೀಚರ್ 15 ಸೆಕೆಂಡ್ಗೆ ಇಳಿಸಿತ್ತು. ಇದೀಗ ಮತ್ತೆ ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದೆ.















ಇನ್ನಷ್ಟು ಸುದ್ದಿಗಳು
ವಾಟ್ಸ್ಆ್ಯಪ್ನಲ್ಲಿ ಬರಲಿದೆ ಬಹುನಿರೀಕ್ಷಿತ ‘ಶೆಡ್ಯೂಲ್ ಮೆಸೇಜ್’ ಫೀಚರ್!
ಹೊಸ ರೂಪದಲ್ಲಿ ಆನ್ಲೈನ್ ವಂಚನೆ- ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ಬಿಐ
ಅಡ್ಮಿನ್ಗಳಿಗೆ ಸುಪರ್ ಪವರ್ ನೀಡಿದ ವ್ಯಾಟ್ಸ್ಆ್ಯಪ್- ಅನಗತ್ಯ ಸಂದೇಶಗಳಿಗೆ ಕಡಿವಾಣ
ವಾಟ್ಸಾಪ್: ಡಿಲೀಟ್ ಮಾಡಿದ ಮೆಸೇಜ್ ಮರಳಿ ಪಡೆಯುವ ಹೊಸ ಅಪ್ಡೇಟ್
ಏರ್ಟೆಲ್ ಗ್ರಾಹಕರ ಕಿಸೆಗೆ ಕತ್ತರಿ: ಶೇ.25ರಷ್ಟು ಟ್ಯಾರಿಫ್ ಹೆಚ್ಚಳ- ನ. 26ರಿಂದ ಜಾರಿ
ಫೋನ್ಪೇ ಬಳಕೆದಾರರಿಗೆ ಶಾಕ್- ಇನ್ಮುಂದೆ ಯುಪಿಐ ಸೇವೆಗೆ ಶುಲ್ಕ
ವಾಟ್ಸ್ಆ್ಯಪ್ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್ ಮಾಡುವ ವಿಧಾನ- ಈ ಫೀಚರ್ ಬಹಳ ಉಪಯುಕ್ತ
ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಡೌನ್- ಬಳಕೆದಾರರ ಪರದಾಟ
ಕೇಂದ್ರದ ಹೊಸ ಐಟಿ ಮಾರ್ಗಸೂಚಿ: ನಿಯಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್
ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ