ಸ್ಕೈಪ್, ಝೂಮ್, ವೆಬ್‌ಎಕ್ಸ್ ಮತ್ತು ಸ್ಲಾಕ್‌ನಂತಹ ಸಾಮಾಜಿಕ ಮೀಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸಲು ನೀವು ಬಯಸುವುದಾದರೆ, ಸರಿಯಾದ ಅಪ್ಲಿಕೇಶನ್ ಅನ್ನು ಬಳಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಲಾಕ್‌ಡೌನ್ ಸಮಯದಲ್ಲಿ ಇವುಗಳು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ ಸೈಬರ್ ಅಪರಾಧಿಗಳು ಈ ಅಪ್ಲಿಕೇಶನ್‌ಗಳ ಹಿಂದೆ ಸಕ್ರೀಯರಾಗಿದ್ದಾರೆ.
ಈ ಅಪ್ಲಿಕೇಶನ್‌ಗಳ ಹೆಸರನ್ನು ಹೋಲುವ ನಕಲಿ ಅಪ್ಲಿಕೇಶನ್‌ಗಳು ಆನ್‌ಲೈನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಪ್ರಚಾರವಾಗುತ್ತಿದೆ. ಸೈಬರ್ ಭದ್ರತಾ ಸಂಸ್ಥೆಯು ಅವುಗಳಲ್ಲಿ ಹಲವು ಆ್ಯಪ್‌ಗಳು ಮಾಲ್ವೇರ್ ಮತ್ತು ಆಡ್ವೇರ್ಗಳನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಮೀಟಿಂಗ್ ಅಪ್ಲಿಕೇಶನ್‌ಗಳು, ಕೋವಿಡ್ -19 ನಿಯಮಗಳಿಂದ ಬಾಧಿತರಾದ ಜನರಿಗೆ ಸಂವಹನ ನಡೆಸಲು ಸುಲಭವಾದ ಮಾರ್ಗವಾಗಿದೆ. ಅಂತಹ ಆ್ಯಪ್‌ಗಳು ಸುರಕ್ಷಿತವಾಗಿದೆಯೇ ಎಂದು ಕ್ಯಾಸ್ಪರ್ಸ್ಕಿ ತಜ್ಞರು ಪರಿಶೀಲಿಸಿದ್ದಾರೆ. ನಂತರದ ವಿಶ್ಲೇಷಣೆಯಲ್ಲಿ ಪ್ರಮುಖ ಅಪ್ಲಿಕೇಶನ್‌ಗಳಾದ ಝೂಮ್, ವೆಬ್‌ಎಕ್ಸ್ ಮತ್ತು ಸ್ಲಾಕ್‌ನಂತೆಯೇ 1,300 ಫೈಲ್‌ಗಳು ಕಂಡುಬಂದಿವೆ. ಆ 1,300 ರಪೈಕಿ 200ರಲ್ಲಿ ಸುರಕ್ಷತಾ ಬೆದರಿಕೆಗಳಿದೆ. ಅತ್ಯಂತ ಪ್ರಚಾರ ಇರುವ ಡೀಲ್ ಪ್ಲೈ, ಡೌನ್‌ಲೋಡ್ ಸ್ಪೋನ್ಸರ್ ಮುಂತಾದ ಆಡ್ ವೇರ್‌ಗಳು ಇವೆ.
ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳ ಹೊರತಾದ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳಿಂದ ಈ ರೀತಿಯ ಆಡ್‌ವೇರ್ ಮತ್ತು ಮಾಲ್‌ವೇರ್ ನುಸುಳುತ್ತದೆ. ಜಾಹೀರಾತುಗಳನ್ನು ಒದಗಿಸುತ್ತಾ, ಅದಕ್ಕಾಗಿ ಹಲವು ಕುತಂತ್ರಗಳನ್ನು ಉಪಯೋಗಿಸುತ್ತದೆ. ಮತ್ತು ವಿವಿಧ ಬದಲಾವಣೆಗಳನ್ನು ಈ ಆ್ಯಡ್ವೇರ್‌ಗಳು ಪ್ರದರ್ಶಿಸುತ್ತವೆ. ಆಡ್ವೇರ್ ದುರುದ್ದೇಶಪೂರಿತ ಸಾಫ್ಟ್‌ವೇರ್ ಅಲ್ಲದಿದ್ದರೂ, ಗೌಪ್ಯತೆಗೆ ಅಪಾಯವನ್ನು ಉಂಟುಮಾಡಬಹುದಾಗಿದೆ.
ಅಪರಾಧಿಗಳು ಅತ್ಯಂತ ಹೆಚ್ಚು ದುರುಪಯೋಗ ಪಡಿಸುವ ಅಪ್ಲಿಕೇಶನ್ ಸ್ಕೈಪ್ ಆಗಿದೆ. ಈ ಅಪ್ಲಿಕೇಶನ್‌ನ ಹೆಸರು ಬಳಸಿದ ಅನುಮಾನಾಸ್ಪದ ಬಳಕೆಯ 120,000 ಫೈಲ್‌ಗಳನ್ನು ಕ್ಯಾಸ್ಪರ್ಸ್ಕಿ ತಜ್ಞರಿಗೆ ಕಂಡುಹಿಡಿಯಲು ಸಾಧ್ಯವಾಗಿದೆ. ಇತರ ಅಪ್ಲಿಕೇಶನ್ ಹೆಸರುಗಳಿಗಿಂತ ಭಿನ್ನವಾಗಿ ಮಾಲ್ವೇರ್ ವಿತರಿಸಲು ಸ್ಕೈಪ್ ಹೆಸರನ್ನು ಹೆಚ್ಚಾಗಿ ಬಳಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ವಾಟ್ಸ್ಆ್ಯಪ್ನಲ್ಲಿ ಬರಲಿದೆ ಬಹುನಿರೀಕ್ಷಿತ ‘ಶೆಡ್ಯೂಲ್ ಮೆಸೇಜ್’ ಫೀಚರ್!
ಹೊಸ ರೂಪದಲ್ಲಿ ಆನ್ಲೈನ್ ವಂಚನೆ- ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ಬಿಐ
ಅಡ್ಮಿನ್ಗಳಿಗೆ ಸುಪರ್ ಪವರ್ ನೀಡಿದ ವ್ಯಾಟ್ಸ್ಆ್ಯಪ್- ಅನಗತ್ಯ ಸಂದೇಶಗಳಿಗೆ ಕಡಿವಾಣ
ವಾಟ್ಸಾಪ್: ಡಿಲೀಟ್ ಮಾಡಿದ ಮೆಸೇಜ್ ಮರಳಿ ಪಡೆಯುವ ಹೊಸ ಅಪ್ಡೇಟ್
ಏರ್ಟೆಲ್ ಗ್ರಾಹಕರ ಕಿಸೆಗೆ ಕತ್ತರಿ: ಶೇ.25ರಷ್ಟು ಟ್ಯಾರಿಫ್ ಹೆಚ್ಚಳ- ನ. 26ರಿಂದ ಜಾರಿ
ಫೋನ್ಪೇ ಬಳಕೆದಾರರಿಗೆ ಶಾಕ್- ಇನ್ಮುಂದೆ ಯುಪಿಐ ಸೇವೆಗೆ ಶುಲ್ಕ
ವಾಟ್ಸ್ಆ್ಯಪ್ನಲ್ಲಿ ನಿಮ್ಮೊಂದಿಗೆ ನೀವೇ ಚಾಟ್ ಮಾಡುವ ವಿಧಾನ- ಈ ಫೀಚರ್ ಬಹಳ ಉಪಯುಕ್ತ
ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಡೌನ್- ಬಳಕೆದಾರರ ಪರದಾಟ
ಕೇಂದ್ರದ ಹೊಸ ಐಟಿ ಮಾರ್ಗಸೂಚಿ: ನಿಯಮವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್
ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ