ಪುತ್ತೂರು: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಈಸ್ಟ್ ಝೋನ್ ವತಿಯಿಂದ ಲೈಟ್ ಆಫ್ ಖುರ್‌ಆನ್ ಉಪನ್ಯಾಸವು ರಂಝಾನಿನ 4 ಶುಕ್ರವಾರಗಳಲ್ಲಿ ಆನ್‌ಲೈನ್ ಮೂಲಕ ನಡೆಯಲಿದೆ.
ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್ ಲೈಟ್ ಆಫ್ ಖುರ್‌ಆನ್ ಉದ್ಘಾಟನಾ ಉಪನ್ಯಾಸವನ್ನು ಮೇ.2ರಂದು ನೆರೆವೇರಿಸಲಿದ್ದಾರೆ. ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್‌ಳರಿ ಕಾವಲ್ ಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.
ರಂಝಾನ್‌ನ ಪ್ರತಿ ಶುಕ್ರವಾರ ರಾತ್ರಿ 9.30 ಕ್ಕೆ ಟಿಡಿಎಸ್ ಕ್ಯಾಂಪಸ್ ಮೀಡಿಯಾ ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ. ಸಂಘಟನೆಯ ಕಾರ್ಯಕರ್ತರೂ ಭಾಗವಹಿಸುವಂತೆ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಈಸ್ಟ್ ಝೋನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.