
- 160ಕ್ಕೂ ಅಧಿಕ ಕುಟುಂಬಗಳಿಗೆ ರಮ್ಝಾನ್ ಕಿಟ್ ವಿತರಣೆ
ಪುತ್ತೂರು:- ಬನ್ನೂರಿನ ಸುನ್ನಿ ಸಂಘಟನೆಗಳಾದ ಎಸ್‌ವೈಎಸ್ ಬ್ರಾಂಚ್, ಎಸ್ಸೆಸ್ಸೆಫ್ ಶಾಖೆ ಮತ್ತು ಜಿಸಿಸಿ ಸುನ್ನಿ ಫ್ರೆಂಡ್ಸ್ ಸಂಯುಕ್ತ ಆಶ್ರಯದಲ್ಲಿ ಬನ್ನೂರು ಮೊಹಲ್ಲಾ ವ್ಯಾಪ್ತಿಯಲ್ಲಿ ನೂರ ಅರುವತ್ತಕ್ಕೂ ಮಿಕ್ಕ ಫಲಾನುಭವಿ ಕುಟುಂಬಗಳಿಗೆ ರಮ್ಝಾನ್-2020 ಕಿಟ್‌ನ್ನು ಏ.24ರಂದು ವಿತರಿಸಲಾಯಿತು. ಬನ್ನೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಕಿಟ್ ವಿತರಣೆಗೆ ಚಾಲನೆಯನ್ನು ನೀಡಿದರು.
ಬಡವ, ಶ್ರೀಮಂತನೆಂದು ನೋಡದೇ ಎಲ್ಲರಿಗೂ ರಂಜಾನ್ ಕಿಟ್:
ಸತತ ನಾಲ್ಕು ವರ್ಷಗಳಿಂದ ಬಡ ಅರ್ಹ ಕುಟುಂಬಗಳಿಗೆ ದಿನಸಿ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ನ್ನು ಸುನ್ನೀ ಸಂಘಟನೆಗಳ ನೆರವಿನೊಂದಿಗೆ ವಿತರಿಸುತ್ತಿದ್ದು, ಈ ವರ್ಷ ಕೊರೋನಾ ಮಹಾಮಾರಿಯಿಂದ ರಾಜ್ಯವೇ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾದವರಿಗೆ ಬಡವರು ಶ್ರೀಮಂತರೆಂಬ ವ್ಯತ್ಯಾಸವಿಲ್ಲದೆ ನೂರ ಅರುವತ್ತಕ್ಕೂ ಮಿಕ್ಕ ಕುಟುಂಬಗಳಿಗೆ ವಿತರಿಸಲಾಗಿದೆ ಎಂದು ಕಿಟ್ ವಿತರಣೆ ಉಸ್ತುವಾರಿ, ಎಸ್‌ವೈಎಸ್ ಸದಸ್ಯ ರಿಯಾಝ್ ಪಾಪ್ಲಿ ಹೇಳಿದರು.
ಊರಿನ ಅನಿವಾಸಿಗಳ ಸಂಘಟನೆ:
ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಬನ್ನೂರಿನ ಸುನ್ನಿ ಕಾರ್ಯಕರ್ತರನ್ನೊಳಗೊಂಡ ಸಂಘಟನೆಯಾಗಿದೆ ಗಲ್ಫ್ ಕೋ-ಅಪರೇಶನ್ ಕೌನ್ಸಿಲ್. ಕಳೆದ ನಾಲ್ಕು ವರುಷಗಳಿಂದ ಬನ್ನೂರಿನ ಪರಿಸರದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಸೇವೆಗಳನ್ನು ಮಾಡುತ್ತಿರುವ ಸಂಘಟನೆ ಇದಾಗಿದ್ದು, ಡಯಾಲಿಸಿಸ್ ರೋಗಿಗಳಿಗೆ ಪ್ರತೀ ತಿಂಗಳು ಧನ ಸಹಾಯ, ಬಡ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ ಮತ್ತು ಮನೆ ನಿರ್ಮಾಣದ ಕಾರ್ಯಕ್ಕೆ ಅರ್ಥಿಕವಾಗಿ ನೆರವು ನೀಡಿದೆ. ಹೀಗೆ ಊರಿನ ನಾನಾ ಹಿತಕಾರ್ಯಗಳಿಗೆ ಸಹಕಾರಿಸುತ್ತಿದೆ. ಊರಿನ ಬಡವರ ಏಳಿಗೆಗಾಗಿ ಪರಿಶ್ರಮಿಸುವ ಅನಿವಾಸಿಗಳ ಕಾರ್ಯಕ್ಕೆ ಊರವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಲಾಕ್‌ಡೌನ್‌ನಿಂದಾಗಿ ರಮ್ಝಾನ್‌ನಲ್ಲಿ ಸಂಕಷ್ಟ ಅನುಭವಿಸಬಾರದೆಂಬ ಉದ್ದೇಶದಿಂದ ಜೆಸಿಸಿ ಸುನ್ನಿ ಫ್ರೆಂಡ್ಸ್ ಸಾಂತ್ವನ ವಿಭಾಗದಿಂದ ಅಗತ್ಯ ದಿನಸಿ ವಸ್ತಗಳ ರಂಜಾನ್ ಕಿಟ್‌ನ್ನು ವಿತರಿಸಲಾಯಿತು. ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್, ಟೀಂ ಇಸಬಾ, ಕ್ಯೂ ಟೀಂ ಕಾರ್ಯಕರ್ತರೂ ಸಾಥ್ ನೀಡಿದ್ದಾರೆ.
ಅಸ್ಸಯ್ಯದ್ ಉಮ್ಮರ್ ತಂಙಳ್ ಬನ್ನೂರು, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಎಸ್‌ವೈಎಸ್ ಪುತ್ತೂರು ಟೀಂ ಇಸಾಬ ಅಮೀರ್ ಇಕ್ಬಾಲ್ ಬಪ್ಪಳಿಗೆ, ಎಸ್‌ವೈಎಸ್ ಪುತ್ತೂರು ಸೆಂಟರ್ ಕಾರ್ಯದರ್ಶಿ ಸ್ವಾಲಿಹ್ ಮುರ, ಸುನ್ನೀ ಸೆಂಟರ್ ಅಧ್ಯಕ್ಷ ಫಾರೂಕ್, ಜೊತೆ ಕಾರ್ಯದರ್ಶಿ ಹೈದರ್ ಮಾರ್ನಡ್ಕ, ಎಸ್‌ವೈಎಸ್ ಬ್ರಾಂಚ್ ಸದಸ್ಯರಾದ ಸಾದೀಕ್ ಬನ್ನೂರು, ಅಬ್ದುಲ್ ರಝಾಕ್, ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಬಾತೀಷ್ ಬನ್ನೂರು, ಎಸ್ಸೆಸ್ಸೆಫ್ ಬನ್ನೂರು ಶಾಖಾಧ್ಯಕ್ಷ ಜಬೀರ್ ಬನ್ನೂರು, ಪ್ರಧಾನ ಕಾರ್ಯದರ್ಶಿ ಉಲ್ಫತುಲ್ಲಾ, ಕ್ಯಾಂಪಸ್ ಕಾರ್ಯದರ್ಶಿ ಸುಹೈಲ್, ನಿಕಟಪೂರ್ವ ಶಾಖಾಧ್ಯಕ್ಷ ಹನೀಫ್ ಬನ್ನೂರು, ಸದಸ್ಯರಾದ ಶಮೀರ್ ಅಕ್ಕರೆ, ಝಾಹೀರ್ ಉಪಸ್ಥಿತರಿದ್ದರು.
ಮಾರಣಾಂತಿಕ ಕಾಯಿಲೆಯಾಗಿರುವ ಕೊರೋನಾ ವೈರಸ್‌ನ ಭೀತಿಯಿಂದಾಗಿ ವಿಶ್ವವೇ ಕಂಗಾಲಾಗಿದೆ. ದೇಶದಲ್ಲಿ ಕೋವಿಡ್ 19 ವೈರಸ್‌ನ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ಬಡವರು ಶ್ರೀಮಂತರೂ ಸಂಕಷ್ಟಗಳನ್ನೂ ಅನುಭವಿಸುತ್ತಿದ್ದಾರೆ, ಬನ್ನೂರಿನ ಸುನ್ನಿ ಸಂಘಟನೆಗಳಾದ ಎಸ್‌ವೈಎಸ್ ಟೀಂ ಇಸಾಬ ,ಎಸ್ಸೆಸ್ಸೆಫ್ ಕ್ಯೂ ಟೀಂ, ಜಿಸಿಸಿ ಸುನ್ನಿ ಫ್ರೆಂಡ್ಸ್ ಕಳೆದ ಒಂದು ತಿಂಗಳಿಂದ ನಿರಂತರ ಸಾರ್ವಜನಿಕರ ಸೇವೆಯನ್ನು ಮಾಡುತ್ತಿದೆ. ಬನ್ನೂರು ಜಮಾಅತ್ ವ್ಯಾಪ್ತಿಯ ಅರ್ಹ ಕುಟುಂಬಗಳಿಗೆ ರಮ್ಝಾನ್ ಕಿಟ್ ವಿತರಿಸುವ ಜೊತೆಗೆ ಸಂಕಷ್ಟದ ಸಮಯಗಳಲ್ಲಿ ಬನ್ನೂರು ಸುನ್ನಿ ಸಂಘ ಕುಟುಂಬ ಆಸರೆಯಾಗಿದೆ – ಫಾರೂಕ್ ಬನ್ನೂರು, ಅಧ್ಯಕ್ಷರು, ಕಾರ್ಯನಿರ್ವಾಹಕ ಸಮಿತಿ ಸುನ್ನಿ ಸೆಂಟರ್ ಬನ್ನೂರು
ಬನ್ನೂರಿನ ಅನಿವಾಸಿ ಸುನ್ನಿ ಕಾರ್ಯಕರ್ತರ ಸಂಘಟನೆಯಾಗಿರುವ ಜೆಸಿಸಿ ಸುನ್ನೀ ಫ್ರೆಂಡ್ಸ್‌ನ ಸಾಂತ್ವನ ವಿಭಾಗದಿಂದ ಏ.24ರಂದು ಊರಿನ ಸುನ್ನೀ ಕುಟುಂಬ ಸಂಘಟನೆಯಾಗಿರುವ ಎಸ್‌ವೈಎಸ್, ಎಸ್ಸೆಸ್ಸೆಫ್, ಟೀಂ ಇಸಾಬ, ಕ್ಯೂ ಟೀಂನ ಕಾರ್ಯಕರ್ತರಿಂದ ದಿನಸಿ ಅಗತ್ಯ ವಸ್ತುಗಳ ರಮ್ಝಾನ್ ಕಿಟ್‌ನ್ನು ಮನೆಗಳಿಗೆ ತಲುಪಿಸಲಾಯಿತು. ಜೆಸಿಸಿ ಸುನ್ನೀ ಫ್ರೆಂಡ್ಸ್‌ನ ಸಲಹೆಗಾರರ ಮತ್ತು ಸರ್ವ ಪದಾಧೀಕಾರಿಗಳ ಸಂಪೂರ್ಣ ಸಹಕಾರದಿಂದಾಗಿ ಜನಸಾಮಾನ್ಯರಿಗೆ ನಮ್ಮ ಕೈಲಾಗುವಷ್ಟು ಮಟ್ಟಿನ ಈ ರೀತಿಯ ಸೇವೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. – ಅಬ್ದುಲ್ ರಝಾಕ್ ಸೌದಿ ಅರೇಬಿಯಾ, ಬನ್ನೂರು ಹಾಗೂ ಪ್ರ.ಕಾರ್ಯದರ್ಶಿ ಜೆಸಿಸಿ ಸುನ್ನಿ ಫ್ರೆಂಡ್ಸ್ ಬನ್ನೂರು. ಅಧ್ಯಕ್ಷರು, ಕೆಸಿಎಫ್ ಖಮೀಸ್ ಮುಷೈತ್ ಸೌದಿ ಅರೇಬಿಯಾ ಸೆಕ್ಟರ್