✍ಇಕ್ಬಾಲ್ ಬಾಳಿಲ
(ಕಾರ್ಯದರ್ಶಿ ಎಸ್ಕೆಎಸ್ಸೆಸ್ಸೆಫ್ಫ್ ದ. ಕ ಜಿಲ್ಲೆ)
ಭಾರತದ ಲಾಕ್ ಡೌನ್ ನಿಯಮದಂತೆ ದೇಶದೆಲ್ಲೆಡೆ ಸಂಪೂರ್ಣ ಬಂದಾಗಿದೆ. ದೇಶದ ಹಲವು ಕಡೆಗಳಲ್ಲಿ ಅವಶ್ಯಕ ವಸ್ತುಗಳಿಗಾಗಿ ಎರಡು ದಿನಕ್ಕೊಮ್ಮೆ ಬೆಳಿಗ್ಗೆ 9ರ ತನಕ ನಿಯಮಾನುಸಾರವಾಗಿ
ತೆರೆದು ಕೊಳ್ಳುತ್ತವೆ. ಅದೇ ನಿಯಮ ನಮ್ಮ ದ.ಕ. ಜಿಲ್ಲೆಯಲ್ಲೂ ನಡೆಯಲಿ.
ಉಸ್ತುವಾರಿ ಸಚಿವರು, ನಾಲ್ಕು ದಿನ ಹೊರಬರದಂತೆ ಹೇಳಿ ನಂತರ ಇಂದು(ಮಾ.31) ಬೆಳಿಗ್ಗೆ 6ರಿಂದ ಸಂಜೆ ಮೂರು ಗಂಟೆಯವರೆಗೆ ಅವಕಾಶ ಕಲ್ಪಿಸಿರುವುದು ಸರಿಯಾದ ಕ್ರಮವಲ್ಲ.
ಒಂದು ದಿನಸಿ ಅಂಗಡಿಯ ಮುಂದೆ ನೂರಾರು ಮಂದಿ ಜಮಾಯಿಸುತ್ತಾರೆ ಒಟ್ಟಿಗೆ ಗುಂಪಾಗಿ ಅಂಗಡಿಗೆ ನೂಕು ನುಗ್ಗಲು ಆರಂಭಗೊಳ್ಳುತ್ತದೆ.
ಕೆಲವೊಂದು ಅಂಗಡಿಗಳಲ್ಲಿ ಸಾಲಾಗಿ ನಿಲ್ಲುವ ವೈವಸ್ಥೆ ಮಾಡಲಾಗಿತ್ತು.ಆದರೆ ಏನು ಪ್ರಯೋಜನ ಇಷ್ಟು ದಿನ ಮನೆಯಲ್ಲಿ ಜಾಗರೂಕತೆಯಿಂದ ಇದ್ದದ್ದನ್ನು ಒಂದೇ ದಿನದಲ್ಲಿ ಕಳೆದುಕೊಂಡರು.ಇನ್ನು ಒಂದು ತಿಂಗಳು ಏನು ಸಿಗಲ್ಲ ಅಂತ ಜನ ಭಾವಿಸಿದ್ದಾರೆ.ಅದ್ದರಿಂದಲೇ ವಸ್ತುಗಳಿಗಾಗಿ ಮುಗಿಬಿದ್ದಿದ್ದಾರೆ.
ದಯವಿಟ್ಟು ಅಧಿಕಾರಿಗಳು ಉಸ್ತುವಾರಿ ಸಚಿವರು, ಸಂಸದರು ಇದರ ಬಗ್ಗೆ ಗಮನ ಹರಿಸಿ ಜನರಿಗೆ ಮಾಹಿತಿ ನೀಡಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ.ಎರಡು ದಿನಕ್ಕೊಮ್ಮೆ ಬೆಳಿಗ್ಗೆ 9ರ ತನಕ ಅವಕಾಶ ಕಲ್ಪಿಸುವಂತೆ ವಿನಂತಿಸುತ್ತೇನೆ. ಇದರಿಂದ ಅಂತರವನ್ನು ಪಾಲಿಸಬಹುದು ರೋಗ ಹರಡುವಿಕೆಯನ್ನು ತಡೆಗಟ್ಟಬಹುದು.