janadhvani

Kannada Online News Paper

ಪವಿತ್ರ قران ನ ಪ್ರಥಮ ವಾಕ್ಯವಾಗಿದೆ ‘ಓದು’ ಎಂದಾಗಿತ್ತು,ಓದು ಎಂಬುದು ಒಂದು ಗಮನಾರ್ಹ ವಾಕ್ಯವಾಗಿದೆ ಓದಿನಿಂದ ಅರಂಭವಾದ ಈ ಜಗತ್ತು ಓದು ಎಂಬುದು ಮುಗಿಯದ ಅಧ್ಯಯನವಾಗಿದೆ ಓದು ಅಂತ್ಯವಾದರೆ ಅದು ಜಗತ್ತಿನ ಅಂತ್ಯವೆನ್ನಬವುದು ಮಾತ್ರವಲ್ಲ ಓದು ಎಂಬ ಕಲಿಕೆಯ ಪದ ಅಂತ್ಯದಿನದವರೆಗೂ ಗಟ್ಟಿಯಾಗಿ ಈ ಭೂಲೋಕದಲ್ಲಿ ನೆಲೆನಿಲ್ಲಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ವಿಶ್ವ ಪ್ರವಾದಿ *ಮುಹಮ್ಮದ್ ಮುಸ್ತಾಫ(ಸ.ಅ)* ಓದಿಗೆ ಒಂದು ವಿಶೇಷ ಸ್ಥಾನಮಾನವನ್ನು ನೀಡಿರುತ್ತಾರೆ, ಪವಿತ್ರ قران ಓದಿದರೆ ಲಭಿಸುವಂತಹ ಮಹಾ ಪುಣ್ಯ ಹಾಗು ಹಲವಾರು ಸತ್ಕರ್ಮಗಳು ಮನಶಾಂತಿ ಹಲವಾರು ಮಾರಕ ರೋಗಗಳ ಗುಣಮುಖ ಪವಿತ್ರ قران ನ ವಾಚನದಿಂದ ಸಾಧ್ಯವಾಗುತ್ತದೆ ಎಂಬುದು ನಗ್ನ ಸತ್ಯತೆಯನ್ನು ಸಹ ಯಾರು ಸಹ ಅಲ್ಲೆಗೆಯುವಂತಿಲ್ಲ, ಪವಿತ್ರ ಖುರ್ಆನಿಗೆ ನೀಡಿದ ಉನ್ನತ ಪದವಿ ಯಾವ ಗ್ರಂಥಕ್ಕೂ ಸರ್ವಶಕ್ತನಾದ ಅಲ್ಲಾಹನು ನೀಡಿಲ್ಲ, ಪವಿತ್ರ ಖುರ್ಹಾನ್ ಲೋಕದ ಅಂತಿಮ ಗ್ರಂಥವಾಗಿದೆ, ಪವಿತ್ರ ಖುರ್ಆನ್ ಓದುದರ ನಡುವೆ ಅದರ ಅರ್ಥವನ್ನು ಅರ್ಥಯಿಸುವ ಮೂಲಕ ಜಗತ್ತಿನ ಹಾಗು ಪರಲೋಕದ ಎಲ್ಲ ಹಾಗುಹೋಗುಗಳನ್ನು ಚಿಂತಿಸಲು ಅರ್ಥಯಿಸಲು ಸಾಧ್ಯವಾಗುತ್ತದೆ ಮಾತ್ರವಲ್ಲ ಜಗತ್ತಿನ ಮಹಾ ರಾಷ್ಟಗಳ ಬುದ್ದಿ ಜೀವಿಗಳು ಖುರ್ಹಾನ್ ಅಧ್ಯಯನ ಮಾಡುವ ಮೂಲಕ ಅದರಂತೆ ನಡೆಯುವ ಹಾಗು ನಡೆಯಲ್ಪಡುವ ಅದ್ಭುತಗಳನ್ನು ಕಂಡು ಆಶ್ಚರಿಗೊಳ್ಳುತ ಅವರು ಸಹ ಪವಿತ್ರ ಇಸ್ಲಾಮಿನತ್ತ ಅಕರ್ಷಣೆಯಾಗುತ್ತಾರೆ ಇದಾಗಿದೆ ಪವಿತ್ರ ಖುರ್ಆನ್ ಓದಿನ ಮಹಾ ಅದ್ಬುತ.

*ತಾನು* ವಿದೇಶಕ್ಕೆ ಕಾಲಿಟ್ಟು *ಕೆ.ಸಿ.ಎಫ್* ಸಂಘಟನೆಯ ಸದಸ್ಯನಾದಾಗ ನಾಡಿನಲ್ಲಿ *SSF* ಕಾರ್ಯಕರ್ತನಾಗಿ ಕಾರ್ಯಾಚರಿಸಿ ನಮ್ಮ ಊರಲ್ಲಿ *SSF* ಮುಖವಾಣಿ ಇಶಾರದ ಸದಸ್ಯತನಕ್ಕೆ ಕಾರ್ಯಚರಿಸುವಾಗ ಸಿಗುವಂತಹ ಬೆಂಬಲ ಈ ಮರುಭೂಮಿಯಲ್ಲಿ ಕನ್ನಡಿಗರ ನಡುವೆ ಸಿಗುವ ಬೆಂಬಲ ನಾಡಿನ ನೆನಪನ್ನು ಮರುಕಳಿಸುತ್ತದೆ.

ಕಳೆದ ನಾಲ್ಕು ತಿಂಗಳ ಹಿಂದೆ ಊರಿಗೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲೂ ಊರಲ್ಲಿ ಇಶಾರದ ಸದಸ್ಯತನಕ್ಕೆ ಇಳಿದಾಗ ಊರ ಸಹ ಕಾರ್ಯಕರ್ತರು ಗಲ್ಫ್ ಇಶಾರದ ಬಗ್ಗೆ ಕೇಳಿದ ವಾಕ್ಯಗಳು ನೆನಪಿಗೆ ಬರುತ್ತಿವೆ ಅಷ್ಟಲ್ಲದೆ ಗಲ್ಫ್ ಇಶಾರ ವಿದೇಶ ನಾಡಿನಲ್ಲೂ ಕಾರ್ಯಾಚರಿಸುತ್ತಿದೆ ಎಂಬ ವಾರ್ತೆಯನ್ನು ಕೇಳಿದಾಕ್ಷಣ ಗೆಳೆಯರು ಆಶ್ಚರ್ಯಗೊಳ್ಳುತ್ತಾರೆ, ಇಶಾರದ ಕಾರ್ಯಚಟುವಟಿಕೆಯ ಹಿಂದೆ ಉಲಮಾ ನಾಯಕತ್ವವಿದೆ,ಕೆ.ಸಿ.ಎಫ್ ಉಮರಾ ನಾಯಕರ ಅತೀವ ಪರಿಶ್ರಮವಿದೆ.

ಕೆ.ಸಿ.ಎಫ್ ಕಾರ್ಯಕರ್ತರು ತಮ್ಮ ಕೆಲಸದ ಬಿಡುವಿನ ಸಂದರ್ಭದಲ್ಲಿ ಸರ್ವ ಕನ್ನಡಿಗರನ್ನು ಭೇಟಿಯಾಗಿ ಇಶಾರದ ಸದಸ್ಯರನ್ನಾಗಿ ಮಾಡಿ ಇಶಾರದ ಬರಹ ಮಹತ್ವವವನ್ನು ತಿಳಿಯಲು ಅವಕಾಶಮಾಡಿಕೊಡುವಂತಹ ಕಾರ್ಯಚಟುವಟಿಕೆ ನಿಜಕ್ಕೂ ಕೆ.ಸಿ.ಎಫ್ ಕಾರ್ಯಕರ್ತರ ಕಾರ್ಯ ಶ್ಲಾಘನೀಯವಾದದ್ದು. ನನಗೆ ಕೆ.ಸಿ.ಎಫ್ ಅಬುಧಾಬಿ ನಾಯಕರು ಇಶಾರದ ಬಗ್ಗೆ ವಿವರಿಸುವಂತೆ ” ಇಶಾರ ಎಂಬ ಕನ್ನಡ ಮಾಸಿಕ ಪತ್ರಿಕೆ ಈ ಯು.ಎ.ಇ ಎಂಬ ಸುಡುಬಿಸಿಲಿನ ಮರುಭೂಮಿಯ ಅರಬಿಗಳ ನಾಡಲ್ಲಿ ನಾಲ್ಕು ವರ್ಷವನ್ನು ದಾಟಿ ಐದನೇ ವರ್ಷಕ್ಕೆ ಕಾಲಿಡುತ್ತಿದೆ ಮಾತ್ರವಲ್ಲ ಯು.ಎ.ಇ ನೆಲೆಯಲ್ಲಿ ಹಲವಾರು ಕನ್ನಡ ಸಾಹಿತ್ಯ ಸಂಘಟನೆ ಕಾರ್ಯಾಚರಿಸುತ್ತಿದರು ಯಾರಿಗೂ ಇಂದಿನವರೆಗೆ ಒಂದು ರೀಜಿಸ್ಟ್ರೆಸನ್ ಮೂಲಕ ಒಂದೇ ಒಂದು ಕನ್ನಡ ಪತ್ರಿಕೆಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಮಾತ್ರವಲ್ಲ ವಿದೇಶದಲ್ಲಿ ನೋಂಧವಣಿಯಾಗಿ ಎರಡು ಸಾವಿರಕ್ಕೂ ಮಿಕ್ಕ ಚಂದಾದಾರರನ್ನು ಹೊಂದಿದ ಕರುನಾಡಿನ ಏಕೈಕ ಪತ್ರಿಕೆ ಅದು ಇಶಾರವಾಗಿದೆ ” ಎಂಬುದು ಗಮನಾರ್ಹ ಹಾಗು ಹೆಮ್ಮೆಯ ವಿಷಯವಾಗಿದೆ.

ಅಧುನಿಕ ಯುಗದಲ್ಲಿ ಅಂತರ್ಜಾಲ ಇಂಟರ್ನೆಟ್ ಕಾಲದಲ್ಲಿರುವ ನಾವು ಪತ್ರಿಕೆ ಓದಲು ಬಿಡುವಿಲ್ಲ ಸಮಯದ ಅಭಾವ ನಮ್ಮನ್ನು ಬಹಳ ಕಾಡುತ್ತಿದೆ,ಪತ್ರಿಕೆ ಓದಲು ಸಮಯದ ಕಾಲವಕಾಶ ಎಲ್ಲಿದೆಂದು ಕೇಳುವ ಯುವ ಸಮೂಹವು ಇಶಾರದಂತಹ ಪತ್ರಿಕೆಯ ಪುಟಗಳನ್ನು ತೆರೆದುನೋಡಿದರೆ ಧಿನಿ ವಿಷಯವಾದ ಪ್ರವಾದಿಗಳ,ಸ್ವಹಾಬಿಗಳ ಚರಿತ್ರೆ,ಮಹಾನುಭಾವರ ಅದರ್ಶ ಜೀವನ,ಅಹ್ಲು ಸುನ್ನದ ಆಶಯ ಆದರ್ಶ,ಸಾಮಾಜಿಕ ಮಾನವೀಯ ಕಲಿಕೆ ಇವೆಲ್ಲವನ್ನೂ ಒಳಗೊಂಡಿರುವ ಸುಂದರ ಬರಹವನ್ನು ಇಶಾರದಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ.

ಮನುಷ್ಯ ಎಂಬ ಜೀವಿಯು ಪುಸ್ತಕವನ್ನು ತೆರೆದು ನೋಡಿದಾಗ ಧಾರ್ಮಿಕ,ಸಾಮಾಜಿಕ,ರಾಜಕೀಯ ಮುಂತಾದ ಅರಿವನ್ನು ಓದಿನಿಂದ ಮಾತ್ರ ಕಲಿಯಲು ಸಾಧ್ಯವಾಗುತ್ತದೆ ಅದ್ದರಿಂದ ಯು.ಎ.ಇ ಎಂಬ ಮರುಭೂಮಿಯಲ್ಲಿರುವ ಕರುನಾಡಿನ ಕನ್ನಡಿಗರು ಜಾತಿ ಮತ ಸಂಘ ಭೇದವಿಲ್ಲದೆ ಇಶಾರ ಎಂಬ ಕನ್ನಡ ಮಾಸ ಪತ್ರಿಕೆಯನ್ನು ಓದಿದರೆ ಹಲವಾರು ಧಾರ್ಮಿಕ,ಸಾಮಾಜಿಕ ಮುಂತಾದ ಅರಿವಿನ ಸವಿಯನ್ನು ಅನುಭವಿವುಸುದರ ಮೂಲಕ ಕನ್ನಡ ನಾಡಿನ ಏಕೈಕ ಪತ್ರಿಕೆಯಾದ *ಇಶಾರದ ಚಂದ ಅಭಿಯಾನ ಯು.ಎ.ಇ ರಾಷ್ಟ್ರಧಾದ್ಯಂತ ಮಾರ್ಚ್.10′ ವರೆಗೆ ಚಂದಾ ಅಭಿಯಾನ* ನಡೆಯುವಾಗ ಸರ್ವ ಕನ್ನಡಭಿಮಾನಿಗಳು ಇಶಾರದ ಚಂದದಾರರಾಗಬೇಕೆಂದು ಈ ಬರಹ ಮೂಲಕ ಪ್ರೀತಿಯಿಂದ ಆಶಿಸುತ್ತಿದ್ದೇನೆ.

✍ ಇರ್ಫಾಝ್ ತುಂಬೆ
(KCF ಅಬುಧಾಬಿ )

error: Content is protected !! Not allowed copy content from janadhvani.com