janadhvani

Kannada Online News Paper

ಗಲ್ಫ್ ಇಶಾರ’ಎಲ್ಲರಿಗಾಗಿ

ಗಲ್ಫ್(ವಿದೇಶ)‌ ನಲ್ಲಿ ಪ್ರಕಟಣೆಗೊಳ್ಳುವ ಏಕೈಕ ಕನ್ನಡ ಮಾಸ ಪತ್ರಿಕೆ “ಗಲ್ಫ್ ಇಶಾರ”
‘ಗಲ್ಫ್ ಇಶಾರ’ಸಂಕೀರ್ಣ ಭಾಷೆ ಬಳಸದೆ ಸರಳ ಭಾಷೆಯಿಂದ ತುಂಬಿದ ಎಲ್ಲಾ ಸಮುದಾಯದ ಜನರು ಓದ ಬಹುದಾದ,ಓದಲೇಬೇಕಾದ ಪತ್ರಿಕೆಯಾಗಿ ಇಂದು ಜನ ಮೆಚ್ಚುಗೆಯನ್ನು ಪಡೆದಿದೆ.
ಪ್ರಚಲಿತ ರಾಜಕೀಯ,ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನೊಳಗೊಂಡ ಓದುಗ ಪ್ರೇಮಿಗಳ ಒಂದು ಅದ್ಭುತ ಮಾಸ ಪತ್ರಿಕೆಯಾಗಿದೆ.

ಇಂದು ಪತ್ರಿಕೆಗಳ ಪ್ರಸಾರ ಬೆಳೆದಿದೆ.
ಜನರ ಕೈಗೆ ಮೊಬೈಲ್ ಬಂದ ಬಳಿಕ ಪ್ರಭಾವ ಕಡಿಮೆಯಾಗಿದೆ.ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸ ಹಾರಿಹೋಗಿದೆ.ಆದರೆ,’ಗಲ್ಫ್ ಇಶಾರ’ ಇದಕ್ಕೆ ಭಿನ್ನವಾಗಿದೆ.

ಪತ್ರಿಕೆಯ ಸಂಪಾದಕ, ಡಿ.ಪಿ.ಯೂಸುಫ್ ಸಖಾಫಿ ಬೈತರ್ ರವರ ಬಿಡುವಿಲ್ಲದ ದುಡಿಮೆಯ ನಡುವಿನ ಅವಿರತ ಶ್ರಮದ ಫಲವಾಗಿ ವಸ್ತುನಿಷ್ಟವಾದ ಬರವಣಿಗೆಯ ಮೂಲಕ ‘ಗಲ್ಫ್ ಇಶಾರ’ ಲಕ್ಷಾಂತರ ಓದುಗರನ್ನು ತನ್ನೆಡೆಗೆ ಆಯಸ್ಕಾಂತದಂತೆ ಸೆಳೆದುಕೊಂಡಿದೆ.

ಆಧುನಿಕತೆಗೆ ಹೊಂದಿಕೊಂಡ ಕಲರ್ ಫುಲ್ ಪತ್ರಿಕೆಯಾಗಿ ಓದುಗ ಪ್ರೇಮಿಗಳ ಕಣ್ಮನ ಸೆಳೆಯುವ ‘ಗಲ್ಫ್ ಇಶಾರ’,ನನ್ನಂತಹ ಹಲವಾರು ಅನಿವಾಸಿ ಬರಹಗಾರರಿಗೆ ವೇದಿಕೆಯಾಗಿದೆ.

ಗಲ್ಫ್ ಇಶಾರ‘ ನನ್ನ ಪತ್ರಿಕೆ,ನಮ್ಮ ಪತ್ರಿಕೆ.
ಓದಿಕೊಳ್ಳಿ,ಹಂಚಿಕೊಳ್ಳಿ,ಚಂದಾದಾರರಾಗಿ.!!

ಇಸ್ಹಾಕ್ ಸಿ.ಐ.ಫಜೀರ್.
ಅಲ್ ಹಸ್ಸ ದಮ್ಮಾಂ ಸೌದಿ ಅರೇಬಿಯಾ.

error: Content is protected !! Not allowed copy content from janadhvani.com