janadhvani

Kannada Online News Paper

ಒಮಾನಿನ ಮಸ್ಕತ್ ಗಾಲದಲ್ಲಿ ಇತ್ತೀಚೆಗೆ ನಿಧನರಾದ ಕೆಸಿಎಫ್ ಒಮಾನ್ ಸ್ಥಾಪಕ ಸದಸ್ಯರಾದ ಕೆ.ಟಿ.ಮುಹಮ್ಮದ್ ಇವರ ಚಿಕ್ಕಪ್ಪ ಕುಂಜತ್ತೂರ್(ಪೊಸೊಟ್) ನಿವಾಸಿ ಮುಹಮ್ಮದ್ ರವರ ಮಯ್ಯಿತ್ ದಫನ ಕಾರ್ಯವನ್ನೂ ಅಮ್ರಾತ್ ಖಬರ್ ಸ್ಥಾನದಲ್ಲಿ ಇಶಾ ನಮಾಝ್ ನ ಬಳಿಕ ನಡೆಸಲಾಯಿತು.

ಕೆಸಿಎಫ್ ಒಮಾನ್ ಸಂಘಟನಾಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಇವರ ನೇತೃತ್ವ ದಲ್ಲಿ ಮಯ್ಯಿತ್ ನಮಾಝ್ ಹಾಗೂ ನಂತರ ನಡೆದ ದಫನ ಕಾರ್ಯಕ್ಕೆ ಐಸಿಎಫ್ ಒಮಾನ್ ಅಧ್ಯಕ್ಷರಾದ ಶಫೀಕ್ ಬುಖಾರಿ ಇವರು ನೇತೃತ್ವವನ್ನು ನೀಡಿದರು.

ಮರಣ ಹೊಂದಿದ ತಕ್ಷಣವೇ ಅದಕ್ಕೆ ಬೇಕಾದ ಕಾರ್ಯಗಳು ಮತ್ತು ದಾಖಲೆ ಪತ್ರಗಳು ಸರಿಪಡಿಸುವಲ್ಲಿ ಐಸಿಎಫ್ , ಆರ್ ಎಸ್ ಸಿ ಮತ್ತು ಕೆಸಿಎಫ್ ಸಮಿತಿಯ ಸದಸ್ಯರು ಸಹಕರಿಸಿದರು.ಮಯ್ಯಿತ್ ಪರಿಪಾಲನೆ ಮತ್ತು ದಫನ ಕಾರ್ಯದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಾಂತ್ವನ ವಿಭಾಗದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರುಗಳು ಹಾಗೂ ಸ್ಥಳೀಯ ಝೋನ್ ಸಮಿತಿಯ ಸದಸ್ಯರುಗಳು ಮತ್ತು ಐಸಿಎಫ್, ಆರ್ ಎಸ್ ಸಿ ಸಮಿತಿಯ ಸದಸ್ಯರುಗಳು,ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

error: Content is protected !!
%d bloggers like this: