janadhvani

Kannada Online News Paper

ಹರಿಹರ : ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕದ ಅಧೀನ ಸಂಸ್ಥೆ ದಾರುಲ್ ಇಹ್ಸಾನ್ ಹರಿಹರ ಸೆಂಟರಿಗೆ ಕೆಸಿಎಫ್ ಅಬುಧಾಬಿ (UAE) ವತಿಯಿಂದ EECO ವ್ಯಾನ್ ಹಸ್ತಾಂತರಿಸಲಾಯಿತು.
ಉತ್ತರ ಕರ್ನಾಟಕದ ಧಾರ್ಮಿಕ ಹಾಗೂ ಶೈಕ್ಷಣಿಕ ಜಾಗೃತಿಗಾಗಿ ಎಸ್ಸೆಸ್ಸೆಫ್ ಇಹ್ಸಾನ್ ಹಾಗೂ ಕೆಸಿಎಫ್ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ಈ ನಿಟ್ಟಿನಲ್ಲಿ ಮಧ್ಯ ಹಾಗೂ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಇಹ್ಸಾನ್ ಸೆಂಟರ್‌ಗಳನ್ನು ನಿರ್ಮಿಸಿದೆ. ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳ ಇಪ್ಪತ್ತೈದು ಪ್ರಮುಖ ಕೇಂದ್ರಗಳಲ್ಲಿ ಇಪ್ಪತ್ತಕ್ಕೂ ಮಿಕ್ಕ ದಾಈಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ಕಾರ್ಯಾಚರಣೆಯನ್ನು ವ್ಯಾಪಿಸಲು ಯೋಜನೆ ಹಾಕಲಾಗಿದೆ.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಕಾಶನ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಹಕೀಂ ತುರ್ಕಳಿಕೆ, ಯುಎಇ ರಾಷ್ಟ್ರೀಯ ನಾಯಕ ಅಹ್ಮದ್ ಕಬೀರ್ ಬಯಂಬಾಡಿ, ಅಬುಧಾಬಿ ಝೋನ್ ನಾಯಕರಾದ ಮೂಸಾ ಮದನಿ ಸಂಪ್ಯ, ಅಶ್ರಫ್ ಸರಳಿಕಟ್ಟೆ, ನಾಸಿರ್ ಗಾಳಿಮುಖ ಹಾಗೂ ಇಹ್ಸಾನ್ ದಾಈಗಳಾದ ಅಶ್ರಫ್ ಸಖಾಫಿ ಹರಿಹರ, ಯಾಸೀನ್ ಸಖಾಫಿ ಹಾವೇರಿ, ಮುನೀರ್ ಸಖಾಫಿ ರಾಣಿಬೆನ್ನೂರು, ಸಿದ್ದೀಕ್ ಫಾಲಿಳಿ ಜಗಳೂರು, ಶರೀಫ್ ಸಖಾಫಿ ಹರಿಹರ, ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ ನವಾಝ್ ಸಖಾಫಿ ಸಹಿತ ಇಹ್ಸಾನ್ ಸೆಂಟರ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇಹ್ಸಾನ್ ವಿಭಾಗ
(ಕೆ ಸಿ ಎಫ್ ಅಬುಧಾಬಿ)

error: Content is protected !!
%d bloggers like this: