ಕರ್ನಾಟಕ ಸುನ್ನೀ ಸ್ಟೂಡಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದರ ಪೇರಿಮಾರ್ ಶಾಖೆಯ ನೂತನ ಕಛೇರಿಗೆ ಶಿಲಾನ್ಯಾಸ ನ.27 ರಂದು ಸಾಯಂಕಾಲ ನಡೆಯಿತು.ಸ್ಥಳೀಯ ಖತೀಬ್ ರಫೀಕ್ ಸಅದಿ ಉಸ್ತಾದ್ ಶಿಲಾನ್ಯಾಸಕ್ಕೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ದಾರುಲ್ ಉಲೂಂ ಮದರಸ ಪೇರಿಮಾರ್ ಅಧ್ಯಾಪಕರಾದ ಅಬೂಬಕರ್ ಸಿದ್ದೀಕ್ ಲತೀಫಿ, ಮುಹಮ್ಮದ್ ನಿಝಾಮಿ, ನವಾಝ್ ಝೈನಿ, ಶಾಖಾ ಅಧ್ಯಕ್ಷ ನಝೀರ್, ಉಪಾಧ್ಯಕ್ಷ SK ರಿಯಾಝ್, ಜೊತೆ ಕಾರ್ಯದರ್ಶಿ ಉನೈಸ್, ಸದಸ್ಯರಾದ ಶಿಹಾಬುದ್ದೀನ್, ಅಮೀನ್ ಮಾಲಿಕ್, ತಬ್ಶೀರ್ ಮಸ್ಜಿದುಲ್ ಖಿಳರ್ ಅಧ್ಯಕ್ಷರಾದ ಶಾಫಿಯಾಕ, ಸ್ಥಳೀಯರಾದ ಅಬೂಸಾಲಿಹಾಕ, ಹಮೀದಾಕ ಮತ್ತಿತರರು ಉಪಸ್ಥಿತರಿದ್ದರು.