ವಿಟ್ಲ ರೇಂಜ್ ವತಿಯಿಂದ ವಿಟ್ಲ ವಲಯ SBS ರೂಪೀಕರಣ

ವಿಟ್ಲ : ಮಂಗಳಪದವು ಮದ್ರಸ ಹಾಲ್ ನಲ್ಲಿ SJM ವಿಟ್ಲ ರೇಂಜ್ ವತಿಯಿಂದ ವಿಟ್ಲ ವಲಯ SBS ರೂಪೀಕರಣ ಹಾಗೂ ಅಧ್ಯಯನ ತರಗತಿ ಯಶಸ್ವಿಯಾಗಿ ನಡೆಯಿತು.

SJM ವಿಟ್ಲ ರೇಂಜ್ ಅಧೀನದಲ್ಲಿ ಮ್ಯಾಗಝಿನ್ ವಿಭಾಗದ ನೇತೃತ್ವದಲ್ಲಿ ಮೆಲ್ಗಟಕದ ನಿರ್ದೇಶನದ ಪ್ರಕಾರ SBS ವಿಟ್ಲ ವಲಯ ರೂಪೀಕರಣ ಒಕ್ಟೋಬರ್ 2 ಬುಧವಾರ ಬೆಳಗ್ಗೆ ಮಂಗಳಪದವು ಮದ್ರಸ ಹಾಲ್ ನಲ್ಲಿ ನಡೆಯಿತು ಕಾರ್ಯಕ್ರಮವು ವಿಧ್ಯಾರ್ಥಿಗಳ ಎಸಮ್ಲಿ ಮೂಲಕ ಪ್ರಾರಂಭ ಗೊಂಡಿತು.

ವಿಟ್ಲ ರೇಂಜ್ ಅಧ್ಯಕ್ಷರಾದ ಪೆರುವಾಯಿ ಶರೀಫ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲಿ ಮ್ಯಾಗಝಿನ್ ವಿಭಾಗದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರೀಸ್ ಮದನಿ ಪಾಟ್ರಕೋಡಿ ಸ್ವಾಗತಿಸಿದರು ಶಾಂತಿನಗರ ಮದ್ರಸ ವಿಧ್ಯಾರ್ಥಿ ತನ್ ವೀರ್ ಅಲಿ ಕಿರಾಅತ್ ಪಠಿಸಿದರು ಮಂಗಳಪದವು ಜುಮಾ ಮಸೀದಿಯ ಖತೀಬರಾದ ಸಲಾಂ ಅಂಜದಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ತದನಂತರ ರೋಚಕ ರೋಮಾಂಚನವಾದ ತರಗತಿಯನ್ನು SYS ರಾಜ್ಯ ಅಧ್ಯಕ್ಷರಾದ ಜಿ.ಎಂ ಮುಹಮ್ಮದ್ ಖಾಮಿಲ್ ಸಖಾಫಿ ಉಸ್ತಾದ್ ಮಂಡಿಸಿದ ನಂತರ SBS ವಿಟ್ಲ ವಲಯ ಸಮಿತಿ ಅಸ್ತಿತ್ವಕ್ಕೆ ಬಂತು ಅಧ್ಯಕ್ಷರಾಗಿ ಇಬ್ರಾಹಿಂ ಸಅದ್ ಕಾಂತಡ್ಕ ಪ್ರಧಾನ ಕಾರ್ಯದರ್ಶಿಯಾಗಿ ತನ್ ವೀರ್ ಅಲಿ ಶಾಂತಿನಗರ ಕೊಶಾಧಿಕಾರಿಯಾಗಿ ಝಯ್ಯಾನ್ ಕೊಡಂಗೆ ಮ್ಯಾಗಝಿನ್ ಉಪಾಧ್ಯಕ್ಷರಾಗಿ ಮುಹಮ್ಮದ್ ರಮೀಝ್ ಕುಡ್ತಮಗೇರು ನಿರಕ್ಕೊಡ್ ಉಪಾಧ್ಯಕ್ಷರಾಗಿ ನಖಾಸ್ ಕೊಳಂಬೆ ಮ್ಯಾಗಝಿನ್ ಕಾರ್ಯದರ್ಶಿಯಾಗಿ ಮುಹಮ್ಮದ್ ಸ್ವಾಲಿಹ್ ಮುಚ್ಚಿರಪದವು ನಿರಕ್ಕೊಡ್ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾನಿಅ ಓಣಿಬಾಗಿಲು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಫಝಲ್ ಮಂಗಳಪದವು,ಮಹ್ಶೂಕ್ ಒಕ್ಕೆತ್ತೂರು,ಅನೀಕ್ ಕಂಬಳಬೆಟ್ಟು,ಅವಾಸ್ ಕುಂಡಡ್ಕ,ಅಬ್ದರ್ರಹ್ಮಾನ್ ಕೊಡಂಗಾಯಿ,ಫರಾಝ್ ಟಿಪ್ಪುನಗರ,ಜಾಸಿಂ ಪೆರುವಾಯಿ,ಮುಹಮ್ಮದ್ ಶಾಮಿಕ್ ಚಂದಲಿಕೆ,ರಿಶಾನ್ ಉಕ್ಕುಡ,ಮಿದ್ ಲಾಜ್ ನೆಲ್ಲಿಗುಡ್ಡೆ,ಮುಹಮ್ಮದ್ ಮುಶ್ತಾಕ್ ಪೆಲ್ತಡ್ಕ,ಮುಹಮ್ಮದ್ ಸಿನಾನ್ ಮದಕ ಆಯ್ಕೆಯಾದರು SJM ವಿಟ್ಲ ರೇಂಜ್ ನಾಯಕರು ಸಮಿತಿಗೆ ಶುಭಹಾರೈಸಿದರು ಕಾರ್ಯಕ್ರಮದಲ್ಲಿ ರೇಂಜ್ ಹಿರಿಯ ನಾಯಕರಾದ ಇಬ್ರಾಹಿಂ ಸಖಾಫಿ ಕೊಡಂಗೆ ಮಿಶನರಿ ವಿಭಾಗದ ಅಧ್ಯಕ್ಷರಾದ ಸ್ವಾದಿಕ್ ಸಖಾಫಿ SMA ವಿಟ್ಲ ಝೋನಲ್ ಪ್ರಧಾನ ಕಾರ್ಯದರ್ಶಿ ಖಾಸಿಂ ಸಖಾಫಿ ಅಳಕೆಮಜಲು SJM ವಿಟ್ಲ ರೇಂಜ್ ಪ್ರಧಾನ ಕಾರ್ಯದರ್ಶಿ ರಝ್ಝಾಕ್ ಮುಸ್ಲಿಯಾರ್ ಕೊಡಂಗೆ SMA ವಿಟ್ಲ ರೀಜ್ಯಿನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ ವಿಟ್ಲ ರೇಂಜ್ ಕೊಶಾಧಿಕಾರಿ ಅಬ್ದುಲ್ ಮಜೀದ್ ಮದನಿ ವಿಟ್ಲ ರೇಂಜ್ ಪರೀಕ್ಷಾ ವಿಭಾಗದ ಕಾರ್ಯದರ್ಶಿ ಎಂ.ಕೆ.ಎಂ ಕೊಡುಂಗಯಿ ಉಪಸ್ಥಿತರಿದ್ದರು ರೇಂಜ್ ಮುದಬ್ಬಿರ್ ಗಳು ರೇಂಜ್ ನಾಯಕರು ವಿಟ್ಲ ರೇಂಜ್ ವ್ಯಾಪ್ತಿಯಲ್ಲಿ ಬರುವ 20 ಮದ್ರಸದ 120 ಮಿಕ್ಕ SBSಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಸ್ವಾದಿಕ್ ಸಖಾಫಿ ನಿರೂಪಿಸಿದರು SBS ವಿಟ್ಲ ವಲಯ ನೂತನ ಅಧ್ಯಕ್ಷ ಇಬ್ರಾಹಿಂ ಸಅದ್ ವಂದಿಸಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!