SSF ಕೋಟೇಶ್ವರ ಹಾಗೂ ಕೋಡಿ ; ಮಾದಕ ದ್ರವ್ಯ ವಿರುಧ್ಧ ಜನಜಾಗೃತಿ

ಕುಂದಾಪುರ : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (SSF) ಕೋಟೇಶ್ವರ ಹಾಗೂ ಕೋಡಿ ಸೆಕ್ಟರ್ ಗಳ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಭಾಗವಾಗಿ ಮಾದಕದ್ರವ್ಯ ವಿರುಧ್ಧ ಬೃಹತ್‌ ಜನ ಜಾಗೃತಿ ಕಾರ್ಯಕ್ರಮ ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ನಡೆಯಿತು.

ಮಾದಕ ದ್ರವ್ಯ ಉಪಯೋಗದ ವಿರುಧ್ಧ ಕುಂದಾಪುರ ಡಿವಿಶನ್ ಅದ್ಯಕ್ಷರಾದ ಸಿದೀಕ್ ಸಖಾಫಿ ಹಂಗಳೂರು, ಕೋಟೇಶ್ವ ಸೆಕ್ಟರ್ ಅದ್ಯಕ್ಷರಾದ ಸಿದ್ದೀಕ್ ಸಅದಿ ಮೂಡುಗೋಪಾಡಿ ಸಂದೇಶ ಭಾಷಣವನ್ನು ನಡೆಸಿದರು.

SYS ನಾಯಕರಾದ ಹುಸೈನ್ ಪಡುಕೆರೆ, SSF ರಾಜ್ಯ ನಾಯಕರಾದ ಅಶ್ರಫ್ ಮುಸ್ಲಿಯಾರ್ ಹಂಗಳೂರು, ಕೋಡಿ ಸೆಕ್ಟರ್ ಅದ್ಯಕ್ಷರಾದ ಇಸ್ಮಾಯಿಲ್ ಸಖಾಫಿ, ಡಿವಿಶನ್ ಕೋಶಾಧಿಕಾರಿ ಅಮೀರ್ ಖಾನ್ ಅಹ್ಸನಿ ಹಳವಲ್ಲಿ ಹಾಗೂ ಹಲವು ಜಿಲ್ಲಾ, ಡಿವಿಶನ್, ಸೆಕ್ಟರ್ ನಾಯಕರು ಭಾಗವಹಿಸಿದ್ದರು._
ಡಿವಿಷನ್ ಪ್ರ.ಕಾರ್ಯದರ್ಶಿಯಾದ ನಿಝಾಂ ಪಡುಕೆರೆ ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ ವಂದಿಸಿದರು.

ವರದಿ : ಪಿ.ಎಂ.ಎಸ್ ಪಡುಬಿದ್ರಿ

Leave a Reply

Your email address will not be published. Required fields are marked *

error: Content is protected !!