janadhvani

Kannada Online News Paper

ಎಸ್ಸೆಸ್ಸೆಫ್ ಸೌಹಾರ್ದತೆಯನ್ನು ಸಾರುವ ಸಂಘಟನೆಯಾಗಿದೆ – ಶಫೀಕ್ ಮಾಸ್ಟರ್ ತಿಂಗಳಾಡಿ

ಪುತ್ತೂರು: ಎಸ್ಸೆಸ್ಸೆಫ್ ಬನ್ನೂರು ಶಾಖೆಯ ವತಿಯಿಂದ ಅಯೋಜಿಸಿದ ಧ್ವಜ ದಿನ ಕಾರ್ಯಕ್ರಮವು ಸೆ.19 ರಂದು ಬನ್ನೂರು ಸುನ್ನೀ ಸೆಂಟರ್ ಮುಂಭಾಗದಲ್ಲಿ ನಡೆಯಿತು.

ಸಯ್ಯದ್ ಉಮ್ಮರ್ ತಂಙಳ್‌ರವರು ಧ್ವಜಾರೋಹಣಗೈದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಸಮಿತಿಯ ಕಾರ್ಯದರ್ಶಿ ಶಫೀಕ್ ತಿಂಗಳಾಡಿ ಮಾತನಾಡಿ, ಎಸ್ಸೆಸ್ಸೆಫ್ ಕಳೆದ ಮೂರು ದಶಕಗಳಿಂದ ಕರ್ನಾಟಕದ ಮಣ್ಣಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಹಲವಾರು ಕ್ರಾಂತಿಗಳನ್ನು ಸೃಷ್ಟಿಸುತ್ತಾ ಬಂದಿದೆ, ಲಕ್ಷಾಂತರ ಸದಸ್ಯರನ್ನು ಹೊಂದಿದ ರಾಜ್ಯದ ಏಕೈಕ ಸಂಘಟನೆಯಾಗಿದೆ .ಕರ್ನಾಟಕದ ಜನರೆಡೆಯಲ್ಲಿ ಸಾಮರಸ್ಯದ ಸೌಹಾರ್ದತೆಯ ಮನೊಭಾವನೆಯನ್ನು ಬೆಳಸುವಲ್ಲಿ ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರಿಗೂ ಸಹಕಾರಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಸುನ್ನಿ ಸೆಂಟರ್ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷರಾದ ಫಾರೂಕ್, ಎಸ್ ವೈ ಎಸ್ ಪ್ರಮುಖರಾದ ಅಬೂಬಕ್ಕರ್ ಹಾಜಿ ಪಾಪ್ಲಿ, ಇಬ್ರಾಹಿಮ್ ಮುಸ್ಲಿಯಾರ್, ಅಬ್ದುರ್ರಝಾಕ್, ರಿಯಾಝ್ ಪಾಪ್ಲಿ, ಹಮೀದ್ ಎಸ್ಸೆಸ್ಸೆಫ್ ಬನ್ನೂರು ಶಾಖಾಧ್ಯಕ್ಷರಾದ ಹನೀಫ್, ಉಪಾಧ್ಯಕ್ಷರಾದ ಶಮೀರ್ , ಜಬೀರ್ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com