ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಅರ್ಧ ವಾರ್ಷಿಕ ಕೌನ್ಸಿಲ್

ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಶನ್ ಎಸ್.ಎಸ್.ಎಫ್ ಉಡುಪಿ ಜಿಲ್ಲಾ ಸಮಿತಿಯ ಅರ್ಧ ವಾರ್ಷಿಕ ಮಹಾಸಭೆ ಯು ಆಗಸ್ಟ್ 3 ಶನಿವಾರ ದಂದು ಜಿಲ್ಲಾಧ್ಯಕ್ಷರಾದ ಶಬ್ಬೀರ್ ಸಖಾಫಿ ಪಣಿಯೂರ್ ರವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ಶಬ್ಬೀರ್ ಸಖಾಫಿಯವರ ದುಆದೊಂದಿಗೆ ಪ್ರಾರಂಭ ವಾದ ಸಭೆಯನ್ನು ರಾಜ್ಯ ಇಹ್ಸಾನ್ ಕನ್ವಿನರ್ ಅಲ್ ಹಾಜ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉದ್ಘಾಟಿಸಿದರು.

ಜಿಲ್ಲಾ ಉಸ್ತುವಾರಿ ಶಾಕಿರ್ ಹಾಜಿ ಮಿತ್ತೂರು ರವರ ಮೇಲ್ನೋಟದಲ್ಲಿ ನಡೆದ ಸಭೆಯಲ್ಲಿ ಎಸ್.ಎಸ್.ಎಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಎನ್.ಸಿ ರಹೀಂ ಕಾರ್ಕಳ ವರದಿ, ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಂ ಮಜೂರು ಕ್ಯಾಂಪಸ್ ವರದಿ ಹಾಗೂ ಜಿಲ್ಲಾ ಕೋಶಾದಿಕಾರಿ KSM ಮನ್ಸೂರ್ ಲೆಕ್ಕ ಪತ್ರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮಿಂದಗಳಿದ ಖ್ಯಾತ ಉಲಮಾ ನಾಯಕರು, ಅಲ್-ಮದೀನಾ ಮಂಜನಾಡಿ ಸಂಸ್ಥೆಯ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅಣುಸ್ಮರಣಾ ಸಂಗಮವು ನಡೆಯಿತು. ರಾಜ್ಯ ನಾಯಕರಾದ ಅಶ್ರಫ್ ರಝಾ ಅಂಝದಿ ಅಣುಸ್ಮರಣಾ ಭಾಷಣ ನಡೆಸಿದರು. ರಾಜ್ಯ ಕೋಶಾದಿಕಾರಿ ರೌಫ್ ಖಾನ್ ಮೂಡುಗೊಪಾಡಿ, ಅಶ್ರಫ್ ಮುಸ್ಲಿಯಾರ್, ಹಾಗೂ ಜಿಲ್ಲಾ, ಡಿವಿಷನ್ ನಾಯಕರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ NC ರಹೀಮ್ ಸ್ವಾಗತಿಸಿ ವಂದಿಸಿದರು.

ವರದಿ: ಪಿಎಂಯಸ್ ಪಡುಬಿದ್ರಿ

2 thoughts on “ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಅರ್ಧ ವಾರ್ಷಿಕ ಕೌನ್ಸಿಲ್

  1. ನಮ್ಮದೊಂದು ವಾರ್ತೆಗಳಿದ್ದರೆ ನಿಮ್ಮ ಜನದ್ವನಿಯಲ್ಲಿ ಹಾಕುತ್ತೀರಾ?

Leave a Reply

Your email address will not be published. Required fields are marked *

error: Content is protected !!