ಅಲ್ ಮದೀನಾ: ಜುಬೈಲ್ ಘಟಕದಿಂದ ಮರ್ಹೂಮ್ ಅಬ್ಬಾಸ್ ಉಸ್ತಾದರ ಅನುಸ್ಮರಣೆ

ಅಲ್ ಮದೀನಾ ಮಂಜನಾಡಿ ಇದರ ಜುಬೈಲ್ ಘಟಕ ಸಮಿತಿಯಿಂದ ಮರ್ಹೂಮ್ ಅಬ್ಬಾಸ್ ಉಸ್ತಾದರ ಅನುಸ್ಮರಣೆ ಸಂಗಮವು ದಿನಾಂಕ 2/8/19 ಶುಕ್ರವಾರ ಮದ್ಯಾಹ್ನ ಜುಮುಅ ನಮಾಝ್ ಬಳಿಕ ಕೆ ಸಿ ಎಫ್ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು MKM ಅಬೂಬಕ್ಕರ್ ಮದನಿ ಹೊಸಂಗಡಿ ಯವರು ವಹಿಸಿಕೂಂಡಿದ್ದರು. ಪ್ರ.ಕಾರ್ಯದರ್ಶಿ ಉಸ್ಮಾನ್ ಮಲಾರ್ ಕಿರಾಅತ್ ಪಠಿಸಿದರು.

ಐ ಎನ್ ಸಿ ನಾಯಕರಾದ ಕಮರುದ್ದೀನ್ ಗೂಡಿನಬಳಿ ಸ್ವಾಗತಿಸಿದರು ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಸಅದಿ ಸಭೆಯನ್ನು ಉದ್ಘಾಟಿಸಿದರು.ಮಾಜಿ ವಲಯ ಅಧ್ಯಕ್ಷರೂ ಉಸ್ತಾದ್ ರವರ ಹಿರಿಯ ಶಿಷ್ಯರೂ ಆದ ಝೈನುದ್ದೀನ್ ಮುಸ್ಲಿಯಾರ್ ದಮ್ಮಾಮ್ ಪ್ರಾಸ್ತಾವಿಕ ಬಾಷಣಗೈದರು. MKM ಅಬೂಬಕ್ಕರ್ ಮದನಿ ಯವರು ಅಧ್ಯಕ್ಷ ಬಾಷಣದಲ್ಲಿ ಶರಫುಲ್ ಉಲಮಾವರ ಅಧ್ಯಾತ್ಮಿಕ ಜೀವನ ಶೈಲಿಯನ್ನು ಸವಿಸ್ತಾರವಾಗಿ ವಿವರಿಸಿದರು.ಅಲ್ ಮದೀನ ಸೌದಿ ರಾಷ್ಟೀಯ ಸಮಿತಿಯ ಪ್ರ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ರವರು ಶರಫುಲ್ ಉಲಮಾರವರ ಹಾಗೂ ಅಲ್ ಮದೀನಾ ಸಂಸ್ಥೆಯ ಕುರಿತು ವಿವರಿಸಿದರು.

ವೇದಿಕೆಯಲ್ಲಿ ಶಂಸುದ್ದೀನ್ ಸಅದಿ, ಮೂಸಾ ಹಾಜಿ ಪೂಡಲ್ ಸಹಿತ ಹಲವು ಗಣ್ಯರು ಆಸೀನರಾಗಿದ್ದರು. ಇಬ್ರಾಹಿಂ ಪಡಿಕ್ಕಲ್ ಕಾರ್ಯಕ್ರಮವನ್ನು ನಿರೂಪಿಸಿ, ಹೈದರ್ ನಈಮಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *

error: Content is protected !!