ಹಾಸನದಲ್ಲಿ ಎಸ್ಸೆಸ್ಸೆಫ್ ರಾಜ್ಯ ಅರ್ಧವಾರ್ಷಿಕ ಕೌನ್ಸಿಲ್

ಹಾಸನ: ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಅರ್ಧವಾರ್ಷಿಕ ಕೌನ್ಸಿಲ್ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಉಮ್ಮರ್ ಅಸ್ಸಖಾಫ್ ಮದನಿರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ಖುಬಾ ಹಾಸನದಲ್ಲಿ ನಡೆಯಿತು.

ಸಯ್ಯಿದ್ ಜಾಬಿರ್ ತಂಙಳ್ ಹಾಸನ ದುಆ: ನೆರವೇರಿಸಿದರು.ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಉಸ್ತಾದ್ ಸಂಘಟನಾ ತರಗತಿಯನ್ನು ನಡೆಸಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ವರದಿಯನ್ನು ವಾಚಿಸಿದರು.ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ ಲೆಕ್ಕ ಪತ್ರವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಶಾಫಿ ನಈಮಿ ಜಮಲುಲೈಲಿ ತಂಙಳ್ ಮಾರನಹಳ್ಳಿ, ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಕೀಂ ಸಕಲೇಶಪುರ, ಮೌಲಾನಾ ನಾಸಿರ್ ಹುಸೈನ್ ರಝ್ವಿ, ಜೆ.ಎಸ್ ಮುಹಮ್ಮದಲಿ ಹಾಸನ, ಬಶೀರ್ ಹಾಜಿ ಹಾಸನ, ಅಮ್ಜದ್ ಖಾನ್ ನೂರಿ ಹಾಸನ, ಹಸೈನಾರ್ ಅನೆಮಹಲ್, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್, ಅನ್ಸಾರ್ ಸಾಬ್ ಹಾಸನ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಖಾಝಿ ಗುಲಾಂ ಹುಸೇನ್ ನೂರಿ, ರಾಜ್ಯ ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಹುಸೈನ್ ಸಅದಿ ಹೊಸ್ಮಾರ್, ಮೌಲಾನಾ ಅಶ್ರಫ್ ರಝಾ ಅಂಜದಿ, ನವಾಝ್ ಭಟ್ಕಳ, ಸಿರಾಜುದ್ದೀನ್ ಸಖಾಫಿ ಕನ್ಯಾನ.

ರಾಜ್ಯ ನಾಯಕರಾದ ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು, ಮುಸ್ತಫಾ ಮಾಸ್ಟರ್ ಉಳ್ಳಾಲ, ಶಾಫಿ ಸಅದಿ ಬೆಂಗಳೂರು, ಎನ್.ಸಿ ರಹೀಂ ಉಡುಪಿ, ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಎ.ಕೆ.ರಝಾ ಅಂಜದಿ ಹೊನ್ನಾವರ, ಇರ್ಫಾನ್ ಅಹ್ಮದ್ ಕಾಗಿನೆಲೆ, ಮಹಮ್ಮದ್ ಆಸಿಫ್ ಚಿತ್ರದುರ್ಗ, ಶರೀಫ್ ಮಡಿಕೇರಿ, ರಫೀಕ್ ಮಡಿಕೇರಿ, ಮುಬಶ್ಸಿರ್ ಅಹ್ಸನಿ ಕೊಂಡಂಗೇರಿ, ವಾಜಿದ್ ಹಾಸನ, ಖಾದರ್ ಭಾಷಾ ದಾವಣೆಗೆರೆ, ಸಿದ್ದೀಕ್ ಸಖಾಫಿ ಭದ್ರಾವತಿ, ಹಕೀಂ ಬೆಂಗಳೂರು, ಆರಿಫ್ ಸಅದಿ ಭಟ್ಕಳ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸ್ವಾಗತಿಸಿ,ಕೊನೆಗೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!