ಅಲ್ ಮದೀನ ಮಲಾಝ್ ಘಟಕ: ಶರಫುಲ್ ಉಲಮಾ ಅನುಸ್ಮರಣೆ

ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಮಲಾಝ್ ಘಟಕದ ವತಿಯಿಂದ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ರವರ ಅನುಸ್ಮರಣಾ ಕಾರ್ಯಕ್ರಮವು ರಿಯಾದಿನ ಬತ್ತಾದಲ್ಲಿರುವ ಅಲ್ ಮಾಸ್ ಅಡಿಟೋರಿಯಂ ಹಾಲ್ ನಲ್ಲಿ ತಾ: 2/8/2019 ರಂದು ಶುಕ್ರವಾರ ಜುಮಾ ಬಳಿಕ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಾಝ್ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಸಾದಾತ್ ರವರು ವಹಿಸಿದ್ದರು. ICF ನ ಹಿರಿಯ ಧಾರ್ಮಿಕ ವಿದ್ವಾಂಸ ಬಹುಮಾನ್ಯರಾದ ಯೂಸುಫ್ ದಾರಿಮಿ ಉಸ್ತಾದ್ ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಮಾತಾನಾಡಿದ ಅವರು ತಮ್ಮ ಜೀವನದ ಅರ್ಧಕಾಲದಷ್ಟು ಸಾವಿರಾರು ಅನಾಥ ನಿರ್ಗತಿಕ ಮಕ್ಕಳ ಬಾಳಲ್ಲಿ ಬೆಳಕಾಗಿ ಅವರ ಪೋ‍ಷಣೆಯಲ್ಲಿ ತೊಡಗಿಸಿಕೊಂಡು ನಾಡಿನಲ್ಲಿ ಶಿಕ್ಷಣ ಕ್ರಾಂತಿಯನ್ನು ತಂದ ಶೈಖುನಾ ಅಬ್ಬಾಸ್ ಉಸ್ತಾದ್ ರವರು ಸಮುದಾಯದ ಸಮುದ್ದಾರಕರು ಆಗಿದ್ದರು ಹಾಗೂ ಪ್ರವಾದಿ (ಸ.ಅ) ರವರನ್ನು ಅತೀವವಾಗಿ ಪ್ರೀತಿಸುತ್ತಿದ್ದ ಆಶಿಕ್ಉರ್ರಸೂಲ್ ಕೂಡಾ ಆಗಿದ್ದರು ಎಂದು ಈ ಸಂಧರ್ಭದಲ್ಲಿ ಭಾವೋಕ್ತರಾಗಿ ಹೇಳಿದರು.

KCF ರಿಯಾದ್ ಝೋನಲ್ ಅಧ್ಯಕ್ಷ ಫಾರೂಕ್ ಸಅದಿ Hಕಲ್ಲು ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಶೈಖುನಾ ಅಬ್ಬಾಸ್ ಉಸ್ತಾದರ ಹೆಸರಲ್ಲಿ ಜನಾಝ ನಮಾಝ್ ಗೆ KSWA ಸೌದಿ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಖಾದರ್ ತಂಙಳ್ ಕೊಡಗು ನೇತೃತ್ವ ನೀಡಿದರು ನಂತರ ತಹ್ಲೀಲ್, ಖತ್ಮುಲ್ ಕುರಾನ್ ಓದಿ ಸಮರ್ಪಿಸಲಾಯಿತು.

KCF ರಿಯಾದ್ ಕೋಶಾಧಿಕಾರಿ ಉಮರ್ ಅಳಕೆಮಜಲು, ಹಂಝ ಮುಸ್ಲಿಯಾರ್ ಚೋಕಂಡಲ್ಲಿ, ಸುಲೈಮಾನ್ ಸಅದಿ, ಮಲಾಝ್ ಘಟಕದ ಉಪಾಧ್ಯಕ್ಷ ಇಬ್ರಾಹಿಂ ಹಮ್ಮಬ್ಬ, ಅಲ್ ಮದೀನ ಸನಯ್ಯ ಘಟಕ ಅಧ್ಯಕ್ಷ T.H ಬಾವ ಹಾಜಿ, ಸನಯ್ಯಘಟಕದ ಅಬ್ದುಲ್ ರಹಿಮಾನ್ ಮದನಿ, ಅಲ್ ಖಾದಿಸ ರಿಯಾದ್ ಅಧ್ಯಕ್ಷ ಇಸ್ಮಾಯಿಲ್ ಕನ್ನಂಗಾರ್, DKSC ರಿಯಾದ್ ಘಟಕ ಅಧ್ಯಕ್ಷ ಅಝೀಝ್ ಬಜ್ಪೆ, ಹಂಝ ಮುಸ್ಲಿಯಾರ್ ಪೊನ್ನಂಪೇಟೆ, ಅಬ್ದುಲ್ ಹಮೀದ್ ಮುಸ್ಲಿಯಾರ್ ಹೊಸಂಗಡಿ, ಅಬ್ದುಲ್ ಅಝೀಝ್ ಮದನಿ , ಅಬ್ದುಲ್ ರಝಾಕ್ ಮುಸ್ಲಿಯಾರ್ ನಾಟೆಕಲ್, ದಾವೂದ್ ಸಅದಿ ಉರುವಾಲುಪದವು, ಇಸ್ಮಾಯಿಲ್ ಮುಸ್ಲಿಯಾರ್ ಕಲ್ಮಿಂಜೆ, ಮುಹಿಯದ್ದೀನ್ ಝುಹ್ರಿ, ಮುಸ್ತಫ ಝೈನಿ ಕಂಬಿಬಾನೆ, ಅಬ್ದುಲ್ ರಝಾಕ್ ಹಾಜಿ ಉಜಿರೆ, ಬಶೀರ್ ತಲಪಾಡಿ, ಹನೀಫ್ ಕಣ್ಣೂರು, ಹಬೀಬ್ ಅಡ್ಡೂರು ಹಾಗೂ ಹಲವಾರು KCF ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಲಾಝ್ ಘಟಕದ ಕೋಶಾಧಿಕಾರಿ ಹನೀಫ್ N.S ಮೊದಲಿಗೆ ಸಭಿಕರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಣೆಗೈದರು, ಪ್ರ.ಕಾರ್ಯದರ್ಶಿ ಮನ್ಸೂರ್ ಪಡಿಕ್ಕಲ್ ಕೊನೆಯಲ್ಲಿ ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!