janadhvani

Kannada Online News Paper

ಅಲ್ ಖಾದಿಸ ಕಾವಲ್ಕಟ್ಟೆ: ಮದೀನಾ ಮುನವ್ವರ ಘಟಕ ಸಮಿತಿಗೆ ನವ ಸಾರಥ್ಯ

ಈ ವರದಿಯ ಧ್ವನಿಯನ್ನು ಆಲಿಸಿ


ಮದೀನಾ ಮುನವ್ವರ: ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಮುನವ್ವರ ಘಟಕ ಇದರ ವಾರ್ಷಿಕ ಸಭೆಯು ಮಂಗಳವಾರ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.

ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಕಾವಳಕಟ್ಟೆ ಇದರ ಸಂಸ್ಥಾಪಕರಾದ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಹಝ್ರತ್
ಕಾವಳಕಟ್ಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಸಂಸ್ಥೆಯ ಮೊದಲ ಕಮಿಟಿ ಆರಂಬಿಸಿದ್ದು, ಮದೀನಾ ಮುನವ್ವರದಲ್ಲಾಗಿದ್ದು ಅದರ ಬರಕತ್ತಿನಿಂದ ಸಂಸ್ಥೆಯು ಉನ್ನತಿಯೆಡೆಗೆ ಸಾಗಿದೆ.

ರಾಜ್ಯದ 22 ಜಿಲ್ಲೆಗಳ ಮಕ್ಕಳು ಇಲ್ಲಿ ಕಲಿಯುತ್ತಿದ್ದು, ನಮ್ಮ ಮಕ್ಕಳು ಝಹ್ರತುಲ್ ಖುರ್ ಆನ್ ಸೇರಿದಂತೆ ಹಲವು ವಿಷಯಗಳಲ್ಲಿ ಮುಂಚೂಣಿಯಲ್ಲಿರುವುದು ಖುಷಿ ತಂದಿದೆ. ಶೀಘ್ರದಲ್ಲೇ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭವಾಗಲಿದೆ ಎಂದರು. ಇದೇ ವೇಳೆ ಹಝ್ರತ್ ಅವರ ಸಮ್ಮುಖದಲ್ಲಿ ನೂತನ ಕಮಿಟಿಯನ್ನು ನೇಮಕಗೊಳಿಸಲಾಯಿತು.

ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಮುನವ್ವರ ಘಟಕದ ನೂತನ ಕಮಿಟಿಯ ವಿವರ
ಅಧ್ಯಕ್ಷ – ಸುಲೈಮಾನ್ ತುರ್ಕಳಿಕೆ
ಉಪಾಧ್ಯಕ್ಷ – ರಫೀಕ್ ಕಾಪು ಹಾಗೂ ತಾಜುದ್ದೀನ್ ಸುಳ್ಯ
ಕಾರ್ಯದರ್ಶಿ – ಜಬ್ಬಾರ್ ಉಪ್ಪಿನಂಗಡಿ
ಗೌರಾವ ಅಧ್ಯಕ್ಷ- ಇಸ್ಮಾಯಿಲ್ ಉಳ್ಳಾಲ
ಉಪ ಕಾರ್ಯದರ್ಶಿ – ಹಕೀಂ ಬೋಳಾರ್ ಹಾಗೂ ಝಾಕೀರ್ ಉಳ್ಳಾಲ
ಕೋಶಾಧಿಕಾರಿ – ರಝಾಕ್ ಉಳ್ಳಾಲ
ಇನ್ನು ಹತ್ತಕ್ಕೂ ಹೆಚ್ಚು ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಳಿಸಲಾಯಿತು. ಈ ವೇಳೆ ಅಶ್ರಫ್ ಸಖಾಫಿ ನೂಜಿ, ಆಸಿಫ್ ಬದ್ಯಾರ್, ಶಬೀರ್, ಸಿದ್ದೀಕ್ ಪಾದೆಕಲ್, ಹುಸೈನಾರ್ ಉರುವಾಲ್ ಪದವು ,ಉಮರ್ ಗೇರುಕಟ್ಟೆ, ಅಶ್ರಫ್ ಮಠ, ಖಾಸಿಂ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.
ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಸೌದಿ ಅರೇಬಿಯಾ ಆರ್ಗನೈಸರ್ ಯೂಸುಫ್ ಮದನಿ ಅವರು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.
ವರದಿ : ಹಕೀಂ ಬೋಳಾರ್

error: Content is protected !! Not allowed copy content from janadhvani.com