janadhvani

Kannada Online News Paper

ಉಪ್ಪಿನಂಗಡಿ: ಮುಹ್ಯುದ್ದೀನ್ ಜುಮಾ ಮಸೀದಿ ಮಾಚಾರ್ ಹಾಗೂ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಸಂಭ್ರಮ ಸಡಗರದಿಂದ ಈದುಲ್ ಫಿತ್ರ್ ಆಚರಿಸಿದರು.

ಪವಿತ್ರ ರಂಝಾನ್ ನಲ್ಲಿ ಒಂದು ತಿಂಗಳು ವ್ರತಾನುಷ್ಠಾನ ನಡೆಸಿ,ಕೆಡುಕಿನಿಂದ ಸರಿದು ನಿಂತಂತೆ ಜೀವನದುದ್ದಕ್ಕೂ ಅಳವಡಿಸಿಕೊಂಡು ಅಲ್ಲಾಹನ ಸಂಪ್ರೀತಿಗಳಿಸುವಂತಾಗಬೇಕು ಎಂದು ಖತೀಬ್ ಅಬ್ದುರಹ್ಮಾನ್ ಸಖಾಫಿ ಖುತ್ಬಾ, ನಮಾಝ್ ಗೆ ನೇತೃತ್ವ ನೀಡಿ ಕರೆ ನೀಡಿದರು.

ಈ ಜಮಾಅತ್ತಿನಲ್ಲಿ ನಿರಂತರ 10 ವರ್ಷ ಸೇವೆಗೈದ ಖತೀಬ್ ಅಬ್ದರಹ್ಮಾನ್ ಸಖಾಫಿ, ಹಾಗೂ 6 ವರ್ಷ ಸೇವೆಗೈದ ಮುಅಲ್ಲಿಂ ಆದಂ ಮುಸ್ಲಿಯಾರ್ ಅವರನ್ನು ಮಸೀದಿ ವತಿಯಿಂದ ಅಧ್ಯಕ್ಷರಾದ ಬಿ.ಎಮ್. ಇಲ್ಯಾಸ್ ನೇತೃತ್ವದಲ್ಲಿ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಮತ್ತು SSF ಶಾಖೆ ವತಿಯಿಂದ ನಗದು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಗೌರವ ಅಧ್ಯಕ್ಷ ಹಂಝ ಬಿ ಎ ,ಕೋಶಾಧಿಕಾರಿ ಅಬ್ದುಲ್ ರಝಾಕ್ ಚೆಕ್ಕೆಡಡಿ, ಪ್ರ.ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಉಪಾಧ್ಯಕ್ಷ ಸಲೀಂ ಅಂಗಡಿ, ಕಾರ್ಯದರ್ಶಿ ಶರೀಫ್ ಬೆದ್ರಳಿಕೆ, SSF ಅಧ್ಯಕ್ಷ ಅಬ್ದುಲ್ ಸಲಾಂ ಅಂಗಡಿ ಉಪಾಧ್ಯಕ್ಷ ಅನ್ಸಾರ್ ಕಿಲೊ ಬಝಾರ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ SSF ಕಾರ್ಯಕರ್ತರು, ಜಮಾಅತರು ಉಪಸ್ಥಿತರಿದ್ದರು. ತೀರ್ಥಹಳ್ಳಿ ಸರಕಾರಿ ಕಾಲೆಜು ಮನಶಾಸ್ತ್ರ ಉಪನ್ಯಾಸಕ ಮಹಮ್ಮದ್ ಇಕ್ಬಾಲ್ ಮಾಸ್ಟರ್ ಬದ್ರಿಯಾ ಕಾರ್ಯಕ್ರಮ ನಿರೂಪಿಸಿದರು.

ವರದಿ: ಎಂ.ಎಂ.ಉಜಿರೆ

error: Content is protected !! Not allowed copy content from janadhvani.com