janadhvani

Kannada Online News Paper

ಉಳ್ಳಾಲ: ಹಿರಿಯ ಧಾರ್ಮಿಕ ಪಂಡಿತ ಶೈಖುನಾ ಅಹ್ಮದ್ ಬಾವ ಉಸ್ತಾದ್ ವಫಾತ್

ಈ ವರದಿಯ ಧ್ವನಿಯನ್ನು ಆಲಿಸಿ


ಉಳ್ಳಾಲ,ಏ.7: ಸಯ್ಯಿದ್ ಮದನಿ ಶರೀಅತ್ ಕಾಲೇಜ್ ನಲ್ಲಿ ಸುದೀರ್ಘ 56 ವರ್ಷಗಳ ಕಾಲ ಮುದರ್ರಿಸರಾಗಿ ಸೇವೆ ಗೈದ ಶೈಖುನಾ ಅಹ್ಮದ್ ಬಾವ ಉಸ್ತಾದ್ ನಿನ್ನೆ ರಾತ್ರಿ ವಫಾತಾದರು.

ಮರ್ಹೂಂ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಅವರೊಂದಿಗೆ ಉಳ್ಳಾಲದ ಪ್ರಸಿದ್ಧ ಮದನಿ ಅರಬಿಕ್ ಕಾಲೇಜಿನಲ್ಲಿ ಪ್ರೊಫಸರಾಗಿ ಸೇವೆ ಗೈದ ಅಹ್ಮದ್ ಬಾವ ಉಸ್ತಾದರು ಮದನಿ ಬಿರುದುದಾರಿಗಳು ಸೇರಿದಂತೆ ಅಪಾರ ಶಿಶ್ಯ ವೃಂದರನ್ನು ಅಗಲಿದ್ದಾರೆ.

ಉಸ್ತಾದರ ಜನಾಝವನ್ನು ಬೆಳಿಗ್ಗೆ 10:30 ಕ್ಕೆ ಉಳ್ಳಾಲ ದರ್ಗಾ ವಠಾರದಲ್ಲಿ ಸಂದರ್ಶನಕ್ಕೆ ಇರಿಸಲಾಗುವುದು.

ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಮದನಿ ನೇತೃತ್ವದಲ್ಲಿ ಮಯ್ಯಿತ್ ನಮಾಝ್ 12 ಘಂಟೆಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.

error: Content is protected !! Not allowed copy content from janadhvani.com