ನೆಮ್ಮದಿಯ ಭಾರತವನ್ನು ಕಟ್ಟಲು ಈದ್ ಸರ್ವರಿಗೂ ಸ್ಪೂರ್ತಿಯಾಗಲಿ : ಕೆ.ಅಶ್ರಫ್

ದಾನದ ಹಬ್ಬವೆಂದು ( ಈದುಲ್ ಫಿತ್ರ್ ) ಗುರುತಿಸಿಕೊಳ್ಳುವ ಈದ್ ಹಬ್ಬವು ಅಪಾರ ಮಾನವೀಯ ಸಂದೇಶವನ್ನು ಒಳಗೊಂಡಿದ್ದು, ಮನುಷ್ಯರೂ ಸೇರಿದಂತೆ ಸರ್ವ ಜೀವ ಜಾಲಗಳ ಹಸಿವನ್ನು ಮೂಡಿಸುವ ಮತ್ತು ಮನುಷ್ಯರಿಗೆ ಧರ್ಮ, ಜಾತಿ, ಭಾಷೆಗಳಾಚೆ ಸ್ಪಂದಿಸುವ ಮನೋಧರ್ಮ ಬೆಳೆಸುವ ಪಾಠಗಳನ್ನು ಹೇಳಿಕೊಡುತ್ತದೆ .

ಒಂದು ತಿಂಗಳ ಉಪವಾಸದಲ್ಲಿ ಪಡೆದುಕೊಂಡ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಮುಂದುವರಿಸಿಕೊಂಡು ಹೋಗುವ ಪ್ರತಿಜ್ಞೆಯ ದಿನವಾಗಿ ಈದ್ ನ ದಿನವನ್ನು ಮುಸ್ಲಿಮರು ಪರಿಗಣಿಸಬೇಕು. ಈ ದೇಶದ ಸರ್ವರ ಸುಖ ನೆಮ್ಮದಿಯೇ ನಮ್ಮೆಲ್ಲರ ಗುರಿಯಾಗಬೇಕು. ಈ ದೇಶ ಎಲ್ಲರದು ಮತ್ತು ಈ ದೇಶದ ಅಭಿವೃದ್ಧಿ, ಶಾಂತಿ ನಮ್ಮೆಲ್ಲರ ಗುರಿಯಾಗಬೇಕು. ಈದ್ ಮನುಷ್ಯ ಕುಲದ ಏಕತೆಯನ್ನೂ ಸಮಾನತೆಯನ್ನೂ ಸಾರಿ ಹೇಳುತ್ತದೆ.

ಧರ್ಮ ಯಾವುದೇ ಇರಲಿ. ಎಲ್ಲರೂ ಸಮಾನರು ಮತ್ತು ಒಂದೇ ಸಮುದಾಯದವರು ಅನ್ನವ ಭ್ರಾತೃತ್ವದ ಸಂದೇಶವನ್ನು ಸಾರುತ್ತದೆ. ಯಾರಿಗೂ ಅನ್ಯಾಯವಾಗದ, ಯಾರೂ ಹಸಿವಿನಿಂದ ಬಳಲದ ಮತ್ತು ಯಾರು ಯಾರನ್ನೂ ದ್ವೇಷಿಸದ ನೆಮ್ಮದಿಯ ಭಾರತವನ್ನು ಕಟ್ಟಲು ಈದ್ ಅನ್ನು ಸ್ಪೂರ್ತಿಯಾಗಿ ಬಳಸೋಣ , ಸರ್ವರಿಗೂ ಈದ್ ಶುಭಾಶಯಗಳು
ಕೆ.ಅಶ್ರಫ್
( ಮಾಜಿ ಮೇಯರ್ )
ಅಧ್ಯಕ್ಷರು , ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ.

Leave a Reply

Your email address will not be published. Required fields are marked *

error: Content is protected !!