janadhvani

Kannada Online News Paper

ಈದ್ ಆಚರಣೆಯು ಸಾಮರಸ್ಯದ ಸಂದೇಶವನ್ನು ನೀಡುವಂತಾಗಲಿ- ಖಾಝಿ ಬೇಕಲ್ ಉಸ್ತಾದ್

ಉಡುಪಿ.ಜೂನ್,4: ಒಂದು ತಿಂಗಳ ಕಠಿಣ ವ್ರತ ಮುಗಿದು ಮುಸ್ಲಿಂ ಸಮುದಾಯ ಪವಿತ್ರ ಈದುಲ್ ಫಿತರ್ ಆಚರಣೆಗೆ ಸಜ್ಜಾಗುತ್ತಿದ್ದು , ಅದು ಒಂದು ತಿಂಗಳ ಕಾಲ ಗಳಿಸಿದ ಆತ್ಮ ಶುಧ್ದಿ ಮತ್ತು ಪರಸ್ಪರ ಸೌಹಾರ್ದದ ಸಂದೇಶಗಳನ್ನು ಸಮಾಜದಲ್ಲಿ ಸಾರುವಂತಾಗಬೇಕೆಂದು ಉಡುಪಿ, ಚಿಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿಯಾಗಿರುವ ಮೌಲಾನಾ ಪಿ.ಎಂ.ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಕರೆ ನೀಡಿದ್ದಾರೆ.

ರಂಝಾನ್ ತಿಂಗಳು ಮನುಷ್ಯನ ಆಂತರಿಕ ಮತ್ತು ಬಾಹ್ಯ ಪರಿಶುಧ್ದಿಯನ್ನು ಸಾಧಿಸಲು ಸೃಷ್ಟಿ ಕರ್ತನಾದ ಅಲ್ಲಾಹನು ಮೀಸಲಿರಿಸಿದ ದಿನಗಳಾಗಿದ್ದು ಅದು ಮುಗಿದ ಮೇಲೂ ಆಂತರಿಕ ನೈರ್ಮಲ್ಯವನ್ನು ಕದಡುವ ಯಾವುದೇ ಕೆಲಸಗಳನ್ನು ವಿಶ್ವಾಸಿ ಸಮೂಹ ಮಾಡಬಾರದು, ರಂಝಾನ್ ತಿಂಗಳ ಒಳಿತುಗಳನ್ನು ಮುಂದುವರಿಸುವಂತೆ ಅವರು ಆಹ್ವಾನ ನೀಡಿದ್ದಾರೆ.

ಸಮಾಜದ ಎಲ್ಲ ವರ್ಗದ ಜನರ ಮಧ್ಯೆ ಶಾಂತಿ ಮತ್ತು ಸಾಮರಸ್ಯ ಖಾತರಿ ಪಡಿಸಲು ಈದ್ ದಿನವು ಕಾರಣವಾಗುವುದೆಂದು ಅವರು ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com