janadhvani

Kannada Online News Paper

ಹಿರಿಯ ವಿದ್ವಾಂಸ ಡಾ.ಶಾಹ್ ಮುಸ್ಲಿಯಾರ್ ವಫಾತ್- ಸಂತಾಪ

ಕಡಬ.ಮೇ,29:ಹಿರಿಯ ಧಾರ್ಮಿಕ ವಿದ್ವಾಂಸ, ಲೇಖಕ ಡಾ. ಶಾಹ್ ಮುಸ್ಲಿಯಾರ್ ಅವರು ಬುಧವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು.

ಸುಮಾರು 32 ವರ್ಷಗಳ ಕಾಲ ಸುಳ್ಯ ಆರಂತೋಡು ಮಸೀದಿಯಲ್ಲಿ ಮುದರ್ರಿಸ್ ಆಗಿ ಹಾಗು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಕನ್ನಡ ಪಾಂಡಿತ್ಯವನ್ನು ಹೊಂದಿದ್ದ ಇವರು ಸುಮಾರು 20 ವರ್ಷಗಳ ಕಾಲ ಸರಳಪಥ ಮತ್ತು ಅಲಮುಲ್ ಹುದಾ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ಇವರು 1966ರಲ್ಲಿ ಕೊಯಿಲ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪುತ್ರ, ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಆತೂರು ಸಅದ್ ಮುಸ್ಲಿಯಾರ್ ಸಂತಾಪ

ಹಿರಿಯ ವಿದ್ವಾಂಸ,ಲೇಖಕ ಶೈಖುನಾ ಡಾ. ಕೆ.ಎಂ. ಶಾಹ್ ಉಸ್ತಾದರ
ಮರಣ ವಾರ್ತೆ ತಿಳಿದು ತೀವ್ರ ದುಃಖವಾಯಿತು.

ದರ್ಸ್ ಕಲಿಕೆಯ ಆರಂಭ ಕಾಲದಲ್ಲಿ ನನ್ನ ಗೌರವಾನ್ವಿತ ಉಸ್ತಾದರಾಗಿದ್ದ ಶಾಹ್ ಉಸ್ತಾದರು ಪ್ರಗಲ್ಭ ವಿದ್ವಾಂಸರೂ ಬರಹಗಾರರೂ ಆಗಿದ್ದರು.ಆ ಕಾಲದಲ್ಲಿ ಸರಳಪಥ ಎಂಬ ಹೆಸರಿನ ಸುನ್ನೀ ಪತ್ರಿಕೆ ಮಾಡಿ ಸುನ್ನತ್ ಜಮಾಅತ್ ನ ಆದರ್ಶಗಳ ಮತ್ತು ಇನ್ನಿತರ ಧಾರ್ಮಿಕ ವಿಚಾರಗಳ ಬಗ್ಗೆ ನಿರಂತರ ಬರೆಯುತ್ತಿದ್ದರು.ಉಸ್ತಾದರ ನಿಧನ ನಮಗೆ ತುಂಬಲಾರದ ನಷ್ಟವಾಗಿದೆ.

ಶೈಖುನಾ ಉಸ್ತಾದರ ಮಗ್ಫಿರತ್ ಮರ್ಹಮತ್ ಗಾಗಿ ದುಆ ಮಾಡಲು ಮತ್ತು ಅವರ ಹೆಸರಿನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಲು ಮತ್ತು ಖುರ್ಆನ್,ತಹ್ಲೀಲ್ ಹೇಳಿ ಹದಿಯ ಮಾಡಲು ಈ ಮೂಲಕ ವಿನಂತಿಸುತ್ತಾ ಅವರ ಬರ್ಝಖೀ ಜೀವನ ಅಲ್ಲಾಹು ಸುಖಮಯಗೊಳಿಸಲಿ. ಆಮೀನ್ ಎಂಬ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸುವೆನು.

✍ ಆತೂರು ಸಅದ್ ಮುಸ್ಲಿಯಾರ್
ಅಧ್ಯಕ್ಷರು ಎಸ್ ಜೆ ಎಂ ಕರ್ನಾಟಕ ರಾಜ್ಯ ಸಮಿತಿ.

error: Content is protected !! Not allowed copy content from janadhvani.com