ಉಳ್ಳಾಲ: ಮೇ 24 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ ನೇಪಾಳ್ ಇಂಟರ್ನ್ಯಾಶನಲ್ ಕರಾಟೆ ಸ್ಫರ್ಧೆ ಯಲ್ಲಿ ಚಿನ್ನ ಮತ್ತು ಕಂಚಿನ ಪದಕವನ್ನು ಪಡೆದ ಬುಶೈರ್ ರಹ್ಮಾನ್ ಎಸ್ಸೆಸ್ಸೆಫ್ ಕಾರ್ಯಕರ್ತನಾಗಿದ್ದು ಸಂಘಟನೆಗೆ ಹೆಮ್ಮೆಯಾಗಿದ್ದಾನೆ.
ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಉಳ್ಳಾಲ ದಾರಂದಬಾಗಿಲಿನ ಮುಹಮ್ಮದ್ ಬುಶೈರ್ ರಹ್ಮಾನ್ ಒಂದು ಚಿನ್ನದ ಪದಕ ಹಾಗು ಒಂದು ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾನೆ. ಅಂತಾರಾಷ್ಟ್ರ ತರಬೇತುದಾರರು ಹಾಗು ತೀರ್ಪುಗಾರರಾದ ದರ್ಣಪ್ಪ.ಕೆ ಇವರಿಂದ ತರಬೇತಿ ಪಡೆದ ಬುಶೈರ್ ರಹ್ಮಾನ್ ಯು.ಎಂ ಬಶೀರ್ ಹಾಗು ಹಲೀಮ ದಂಪತಿಯ ಸುಪುತ್ರನೂ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವ್ಯಾಪ್ತಿಯ ತೊಕ್ಕೋಟು ಸೆಕ್ಟರ್ ಅಧೀನದ ಎಸ್ಸೆಸ್ಸೆಫ್ ದಾರಂದಬಾಗಿಲು ಶಾಖಾ ಸದಸ್ಯನಾಗಿದ್ದಾನೆ.
ಬುಶೈರ್ ರಹ್ಮಾನ್ ಇನ್ನಷ್ಟು ಉನ್ನತಿಗೇರಲಿ ಎಂದು ಹಾರೈಸುತ್ತಾ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ವರದಿ:ಮೊಹಮ್ಮದ್ ಆಶಿಕ್
(ಮಾಧ್ಯಮ ಕಾರ್ಯದರ್ಶಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್)