janadhvani

Kannada Online News Paper

ಮನಾಮ: ವರ್ಷಂಪ್ರತಿ ನಡೆಸುವ ಬೃಹತ್ ಇಫ್ತಾರ್ ಸಂಗಮವು ದಿನಾಂಕ 24-5-2019ರಂದು ಸಂಜೆ 5 ಗಂಟೆಗೆ ಬಹರೈನ್ ಮನಾಮದಲ್ಲಿ ನಡೆಯಿತು. ಇದು ಕೇವಲ ಇಫ್ತಾರ್ ಕಾರ್ಯಕ್ರಮ ಮಾತ್ರವಾಗಿರದೆ, ಬಹರೈನಿನ ಅಷ್ಟ ದಿಕ್ಕುಗಳಿಂದಲೂ ಆಗಮಿಸಿದ ಅನಿವಾಸಿ ಕನ್ನಡಿಗರ ಬೃಹತ್ ಸಂಗಮವಾಗಿತ್ತು.

ಕೆಸಿಎಫ್ ಐ ಎನ್ಸಿ ಸಾಂತ್ವನ ವಿಭಾಗದ ಅಧ್ಯಕ್ಷ ರಾದ ಜಮಾಲುದ್ದೀನ್ ವಿಟ್ಟಲ್ ರವರ ಉಸ್ತುವಾರಿಯಲ್ಲಿ ನಡೆದ ಇಫ್ತಾರ್ ಸಂಗಮವು ಬಹಳ ವಿಜೃಂಭಣೆಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್ ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇನೂರು ಮುಹಮ್ಮದ್ ಅಲಿ ಮುಸ್ಲಿಯಾರ್ರವರ ದುಃಅದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ಉದ್ಘಾಟನೆಯನ್ನು ಡಿಕೆಎಸ್ಸಿ ಬಹರೈನ್ ಕಮಿಟಿ ಅಧ್ಯಕ್ಷರಾದ ಮಜೀದ್ ಸಅದಿ ಪೆರ್ಲ ರವರು ನೆರವೇರಿಸಿದರು.

ಕೆಸಿಎಫ್ ಬಹರೈನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತವನ್ನು ಕೋರಿದರು.
ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರೂ, ಕರ್ನಾಟಕ ಎಸ್. ವೈ.ಎಸ್ ಪ್ರಧಾನ ಕಾರ್ಯದರ್ಶಿ, ಭಾಷಣ ರತ್ನ ಡಾ|ಎಂ.ಎಸ್.ಎಂ ಝೈನಿ ಕಾಮಿಲ್ ಸಖಾಫಿ ಉಸ್ತಾದರು ಮುಖ್ಯ ಪ್ರಭಾಷಣಗೈದರು.

ವಿಶೇಷ ಅತಿಥಿಯಾಗಿ ಪ್ಯಾಲೆಸ್ತೀನ್ ರಾಯಭಾರಿ ಸನ್ಮಾನ್ಯ ತ್ವಾಹ ಎಂ.ಅಬ್ದುಲ್ ಖಾದರ್ ಹಾಗೂ ಬಹರೈನ್ ಉಧ್ಯಮಿ ರಶೀದ್ ರೆಮಿ ಆಗಮಿಸಿದ್ದರು.ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಮೆಟೆಲ್ಕೊ ರಝಾಕ್ ಹಾಜಿ ಅಲ್ಲದೆ ಕನ್ನಡ ಸಂಘ ,ಎನ್ ಆರ್ ಐ ಕೆ ಬಹರೈನ್ ಇದರ ನೇತಾರರು ಹಾಗೂ ಹಲವಾರು ಉಲಮಾಗಳು, ಸಾಮಾಜಿಕ ನೇತಾರರು ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೆ ಕೆ.ಸಿ.ಎಫ್ ಐಎನ್ಸಿ, ರಾಷ್ಟ್ರೀಯ, ಝೋನಲ್ ಹಾಗೂ ಸೆಕ್ಟರ್ ನೇತಾರರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಅಲ್ಲದೆ ಬಹರೈನ್ ವಿವಿಧ ಅನಿವಾಸಿ ಸಂಘಟನೆಗಳ ನೇತಾರರು, ಸದಸ್ಯರು ಗಳು ಪಾಲ್ಗೊಂಡಿದ್ದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸ್ಕಿಲ್ ಡೆವಲಪ್ಮೆಂಟ್ ಚೆಯರ್ಮನ್ ಬಶೀರ್ ಕಾರ್ಲೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !! Not allowed copy content from janadhvani.com