ಬಹು ನಿರೀಕ್ಷಿತ ಖುರ್ ಆನ್ ಕನ್ನಡಾನುವಾದ ಮೊಬೈಲ್ ಆಪ್ ಬಿಡುಗಡೆ

ಒಮಾನ್ : ಇಸ್ಲಾಮಿಕ್ ವೇ ಕನ್ನಡ ಪ್ರಸ್ತುತಪಡಿಸಿದ ಖುರ್ ಆನ್ ಕನ್ನಡ ಮೊಬೈಲ್ ಅಪ್ಲಿಕೇಷನನ್ನು KCF ಒಮಾನ್ ಐಟೀಮ್ ವತಿಯಿಂದ ನಡೆದ ಬೃಹತ್ ಇಫ್ತಾರ್ ಮೀಟ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಡುಗಡೆ ಗೊಳಿಸಲಾಯ್ತು.

“ಕುರ್-ಅನ್ ಕನ್ನಡ” ಇದರ ಅನುವಾದಕರಾದ ಸಯ್ಯಿದ್ ಹಬೀಬುಲ್ಲಾಹಿ ಪೆರುವಾಯಿ ತಂಙಳ್ ರವರ ನೇತೃತ್ವದಲ್ಲಿ ಹಾಗೂ ಶೈಖುನಾ ಪೇರೋಡ್ ಉಸ್ತಾದರ ಸುಪುತ್ರ ಮುಹಮ್ಮದ್ ಬಶೀರ್ ಅಲ್ ಅಝ್ಹರಿ, ಕೆಸಿಎಫ್ ಅಂತರಾಷ್ಟ್ರೀಯ ಆಡಳಿತ ವಿಭಾಗದ ಅಧ್ಯಕ್ಷರಾದ ಉಮರ್ ಸಖಾಫಿ ಮಿತ್ತೂರ್, ಸಂಘಟನಾ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬರ್ಕ, ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಯ್ಯೂಬ್ ಕೋಡಿ, ಕಾರ್ಯದರ್ಶಿ ಸ್ವಾದಿಖ್ ಸುಳ್ಯ, ಕೋಶಾಧಿಕಾರಿ ಆರಿಫ್ ಕೋಡಿ, ಇಸ್ಲಾಮಿಕ್ ವೇ ಟೀಮ್ ಸದಸ್ಯರಾದ ಅಶ್ರಫ್ ಕುತ್ತಾರ್ ಹಾಗೂ ಕೆಸಿಎಫ್ ಝೋನ್ ಮತ್ತು ಸೆಕ್ಟರ್ ನಾಯಕರ ಸಮ್ಮುಖದಲ್ಲಿ ಬಹು ನಿರೀಕ್ಷಿತ ಮೊಬೈಲ್ ಆಪನ್ನು ಬಿಡುಗಡೆಗೊಳಿಸಲಾಯಿತು.
ಈ ಅಪ್ಲಿಕೇಶನನ್ನು ಗೂಗಲ್ ಸ್ಟೋರ್ ನಿಂದ ಡೌನ್‌ಲೋಡ್ ಮಾಡಲು ಈ ಲಿಂಕನ್ನು ಉಪಯೋಗಿಸಿ.

https://play.google.com/store/apps/details?id=com.sawad.qurankannada

Leave a Reply

Your email address will not be published. Required fields are marked *

error: Content is protected !!