janadhvani

Kannada Online News Paper

ರಸ್ತೆ ಅಪಘಾತ: ಮೂಳೂರು ಅಲ್ ಇಹ್ಸಾನ್ ಮುದರ್ರಿಸ್ ಸುಹೈಲ್ ಸಅದಿ ನಿಧನ

ಗಂಗೊಳ್ಳಿ, ಎ. 21: ಮೂಳೂರು ಅಲ್ ಇಹ್ಸಾನ್ ಎಜು ಪ್ಲಾನೆಟ್ ದಅವಾ ವಿಭಾಗದ ಮುದರ್ರಿಸ್ ಸುಹೈಲ್ ಸಅದಿಯವರು ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.

ತ್ರಾಸಿ ಹೆದ್ದಾರಿ 66ರಲ್ಲಿ ಬೈಕ್ ಮತ್ತು ಬೊಲೆರೋ ವಾಹನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಮುದರ್ರಿಸ್ ಕೇರಳದ ಕಣ್ಣೂರ್ ನಿವಾಸಿಯಾಗಿದ್ದು, ಇತ್ತೀಚಗಷ್ಟೇ ವೈವಾಹಿಕ ಜೀವನ ಆರಂಭಿಸಿದ್ದರು.

ಅಪಘಾತದ ನಂತರ ಬೊಲೆರೋ ಪಲ್ಟಿಯಾದ ಪರಿಣಾಮ ಸುಹೈಲ್ ಸಅದಿ ಸಹಿತ ಮೂವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರ ಭಟ್ಕಳ ಮೂಲದ ಭರತ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

error: Content is protected !! Not allowed copy content from janadhvani.com