janadhvani

Kannada Online News Paper

ಸ್ಕೂಟರ್ ಅಪಘಾತದಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಮೃತ್ಯು

ಮಂಗಳೂರು, ಎ .18: ಅಂಗಡಿಯಿಂದ ಸಾಮಾನು ಖರೀದಿಸಲು ಸ್ಕೂಟರಿನಲ್ಲಿ ತೆರಳಿದ್ದ ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ (15) ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಏಪ್ರಿಲ್ 17 ಬುಧವಾರ ಮಧ್ಯಾಹ್ನ ಗಂಜಿಮಠ ಬಳಿ ಕುಕ್ಕಟ್ಟೆ ತರೇಮಾರ್ನಲ್ಲಿ ಈ ಅಪಘಾತ ಸಂಭವಿಸಿದೆ.
ಮೊಗರುಗುತ್ತು ಹೊಸಮನೆ ಸೀತಾರಾಮ್ ಶೆಟ್ಟಿ ಮತ್ತು ಯಶೋಧಾ ದಂಪತಿಗಳ ಮಗಳಾದ ಸುಷ್ಮಾ ಶೆಟ್ಟಿ ಗುರ್ಪುರ ಕೈಕಂಬದ ಪಾಂಪೈ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.

ಸ್ಕೂಟರ್ನಲ್ಲಿ ತಾರೆಮಾರ್ನಲ್ಲಿ ಮನೆಯ ಹತ್ತಿರದ ಅಂಗಡಿಯಿಂದ ಕೆಲವು ಸಾಮಾನುಗಳನ್ನು ಖರೀದಿಸಲು ತೆರಳಿದ ಸುಷ್ಮಾ ಹಿಂದಿರುಗುವ ವೇಳೆ ತನ್ನ ವಾಹನದ ಚಕ್ರಗಳು ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡ ಸುಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದ ಸುಷ್ಮಾ ಶೆಟ್ಟಿಮರಣವು ಗ್ರಾಮದ ಎಲ್ಲರಿಗೂ ತೀವ್ರವಾದ ದುಃಖವನ್ನು ತಂದಿದೆ. ಪ್ರಕರಣವನ್ನು ನೋಂದಾಯಿಸಿದ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !! Not allowed copy content from janadhvani.com