ಮುಡಿಪು:ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವತಿಯಿಂದ ಡಿವಿಷನ್,ಸೆಕ್ಟರ್ ಹಾಗೂ ಯೂನಿಟ್ ಗಳ ಪ್ರಧಾನ ಕಾರ್ಯದರ್ಶಿಗಳಿಗಾಗಿ ಕಡತ ನಿರ್ವಹಣಾ ತರಬೇತಿ ಎಪ್ರಿಲ್ 11 ಗುರುವಾರ ರಾತ್ರಿ 7:00 ಗಂಟೆಗೆ ಸಾಂಬರತೋಟ ಮದ್ರಸಾ ಹಾಲ್ ನಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ತೌಸೀಫ್ ಸ ಅದಿ ಹರೇಕಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಡತ ನಿರ್ವಹಣಾ ತರಬೇತಿಯನ್ನು ನಡೆಸಲಿರುವರು ಎಂದು ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.