SSF ಗುರುವಾಯನಕೆರೆ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

ಗುರುವಾಯನಕೆರೆ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(SSF) ಗುರುವಾಯನಕೆರೆ ಸೆಕ್ಟರ್ ವತಿಯಿಂದ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ, SSF ದ‌.ಕ ಜಿಲ್ಲಾ ಬ್ಲಡ್ ಸೈಬೋ ಇದರ 75 ನೇ ರಕ್ತದಾನ ಶಿಬಿರವು ಎಪ್ರಿಲ್- 07- 2019 ರಂದು ಸಿರಾಜುಲ್ ಇಸ್ಲಾಂ ಮದ್ರಸ, ಬದ್ಯಾರ್ ಇಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷರಾದ ಬಹು| ಜಮಾಲುದ್ದೀನ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಉಸ್ತಾದರು ದುಆ ನೆರವೇರಿಸಿದರು.ಸೆಕ್ಟರ್ ಪ್ರ.ಕಾರ್ಯದರ್ಶಿ ಫಾರೂಖ್ ಮದ್ದಡ್ಕ ರವರು ಸ್ವಾಗತ ಮಾಡಿದರು, ನಂತರ ಸ್ಥಳೀಯ ಖತೀಬ್ ಉಸ್ತಾದರಾದ ಬಹು| ಅಬೂಬಕ್ಕರ್ ಸ-ಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ತದನಂತರ SSF ಬೆಳ್ತಂಗಡಿ ಡಿವಿಶನ್ ಬ್ಲಡ್ ಕ್ಯಾಂಪ್ ಉಸ್ತುವಾರಿಗಳು ಹಾಗೂ ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ ಕಾರ್ಯಾಚರಣೆಯ ಕುರಿತಾಗಿ ವಿವರಿಸಿದರು.

ಸ್ಥಳೀಯ ಉಸ್ತಾದರಾದ ಬಹು|| ಅಬೂಬಕ್ಕರ್ ಸ-ಅದಿ ಉಸ್ತಾದರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧೀಕೃತ ಚಾಲನೆಯನ್ನು ನೀಡಿದರು…ಬಳಿಕ, ಊರಿನ & ಹಲವಾರು ಶಾಖೆಗಳು ಕಾರ್ಯಕರ್ತರು ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…

ಕೊನೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮಕ್ಕೆ SSF ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಜ|| ಕರೀಂ ಬೋಳಂತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ರಕ್ತದಾನದ ಅಗತ್ಯತೆ & ಉಪಯುಕ್ತತೆ ಹಾಗೂ ಕಳೆದ 20 ತಿಂಗಳ ಬ್ಲಡ್ ಸೈಬೋ ಅಧೀನದಲ್ಲಿನ ಕಾರ್ಯಾಚರಣೆಯ ಕುರಿತಾಗಿ ವಿವರಿಸಿದರು.

ವೇದಿಕೆಯಲ್ಲಿ ಸ್ಥಳೀಯ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಜ|| ಅಬೂಬಕ್ಕರ್,ಪ್ರ.ಕಾರ್ಯದರ್ಶಿ ಜ|| ಅಬ್ಬಾಸ್ ಬಿ.ಎಚ್, ಕೋಶಾಧಿಕಾರಿ ಜ|| ಅಬ್ದುಲ್ ಖಾಸಿಂ, ಡಿವಿಶನ್ ನಾಯಕರಾದ ಹಾರೀಸ್ ಕುಕ್ಕುಡಿ, ಕರೀಂ ಸಖಾಫಿ, ಸಿದ್ದೀಕ್ ಪರಪ್ಪು,ಡಿವಿಶನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ, SSF ಬದ್ಯಾರ್ ಶಾಖೆಯ ಅಧ್ಯಕ್ಷರಾದ ತೌಸೀಫ್ ಹಾಗೂ ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.

SSF ಸೆಕ್ಟರ್ ಕಾರ್ಯದರ್ಶಿ ಸಿದ್ದೀಕ್ ಜಾರಿಗೆಬೈಲು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ವರದಿ : ಸಿದ್ದೀಕ್ ಜಾರಿಗೆಬೈಲು

Leave a Reply

Your email address will not be published. Required fields are marked *

error: Content is protected !!