janadhvani

Kannada Online News Paper

ಅಲ್ ಮದೀನಾ ಮಂಜನಾಡಿ ಮಲಾಝ್ ಘಟಕ 17 ನೇ ವಾರ್ಷಿಕ ಮಹಾಸಭೆ

ರಿಯಾದ್: ಅಲ್ ಮದೀನಾ ಮಂಜನಾಡಿ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಮಲಾಝ್ ಘಟಕದ ವಾರ್ಷಿಕ ಮಹಾಸಭೆ ಇತ್ತೀಚಿಗೆ ಅಲ್ ಮದೀನಾ ಮಲಾಝ್ ಸೆಂಟರ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಾದಾತ್ ರವರು ವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಸ್ವಲಾತ್ ಮಜ್ಲಿಸ್ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ಸಂಚಾಲಕರಾದ ಇಬ್ರಾಹಿಂ ಹಮ್ಮಬ್ಬ ಉಳ್ಳಾಲ ರವರು ನೆರವೇರಿಸಿ ಮಾತನಾಡಿದರು.

ಸಮಿತಿ ಪ್ರ.ಕಾರ್ಯದರ್ಶಿ ಮನ್ಸೂರ್ ಪಡಿಕ್ಕಲ್ ರವರು ಗತ ವರ್ಷದ ವರದಿಯನ್ನು ಮಂಡಿಸಿದರು ಹಾಗೂ ಕೋಶಾಧಿಕಾರಿ ಹನೀಫ್ NS ವಾರ್ಷಿಕ ಲೆಕ್ಕಪತ್ರ ವಾಚಿಸಿದರು. ಗತ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ರಚನೆಯನ್ನು ಅಬ್ದುಲ್ ಖಾದರ್ ಸಾದಾತ್ ರವರು ನೆರವೇರಿಸಿ ಅಧ್ಯಕ್ಷತೆ ಭಾಷಣ ಮಾಡಿದ ಅವರು 16 ವರ್ಷಗಳ ಕಾಲ ನಮ್ಮ ಘಟಕದ ಸಾಧನೆಗಳನ್ನು ಸಭಿಕರಿಗೆ ವಿವರಿಸಿದರು ಹಾಗೂ ಈ ಹಿಂದೆ ಈ ಸಮಿತಿಯ ಶ್ರೇಯೋಭಿವೃಧ್ದಿಗೆ ಶ್ರಮಿಸಿ ಪ್ರವಾಸಿ ಜೀವನಕ್ಕೆ ವಿರಾಮ ಹಾಕಿ ಊರಲ್ಲಿದ್ದೂ ಮಲಾಝ್ ಘಟಕದ ಸರ್ವತೋಮುಖ ಬೆಳವಣಿಗಾಗಿ ಈಗಲೂ ದುಡಿಯುತ್ತಿರುವ ನೇತಾರರ ಶ್ಲಾಘನೀಯ ಕಾರ್ಯ ವೈಖರಿಯನ್ನು ನವ ಚುನಾಯಿತ ಸದಸ್ಯರು ಮೈಗೂಡಿಸಬೇಕೆಂದು ಸಲಹೆ ನೀಡಿದರು. ಘಟಕದ ಸಂಚಾಲಕರಾದ ಅನ್ಸಾರ್ ಮುಹಮ್ಮದ್ ಉಳ್ಳಾಲ ಆಶಂಸ ಬಾಷಣ ಮಾಡಿದರು.

ಕಾರ್ಯಕ್ರಮದ ಮೊದಲಿಗೆ ಶಮೀರ್ ಮುಹಮ್ಮದ್ ಉಳ್ಳಾಲ ಕಿರಾಅತ್ ಪಠಿಸಿದರು. ಘಟಕದ ಕೋಶಾದಿಕಾರಿ ಹನೀಫ್ NS ಸಭಿಕರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಝಹೀರ್ ಅಬ್ಬಾಸ್ ಉಳ್ಳಾಲ ಕೊನೆಯಲ್ಲಿ ಧನ್ಯವಾದಗೈದರು.

2019/20 ನೇ ಸಾಲಿನ ನೂತನ ಸಮಿತಿ:-

ಗೌರವಾಧ್ಯಕ್ಷರು: ಫಾರೂಕ್ ಅಬ್ಬಾಸ್ ಉಳ್ಳಾಲ

ಕೋ ಆರ್ಡಿನೇಟರ್: ಮುಹಿಯುದ್ದೀನ್ ಮೊಂಟೆಪದವು

ಅಧ್ಯಕ್ಷರು: ಅಬ್ದುಲ್ ಖಾದರ್ ಸಾದಾತ್

ಉಫಾಧ್ಯಕ್ಷರು: ಇಬ್ರಾಹಿಂ ಹಮ್ಮಬ್ಬ

ಪ್ರ.ಕಾರ್ಯದರ್ಶಿ: ಮನ್ಸೂರ್ ಪಡಿಕ್ಕಲ್

ಕೋಶಾಧಿಕಾರಿ: ಹನೀಫ್ NS

ಜೊತೆ ಕಾರ್ಯದರ್ಶಿಗಳು: ಬಶೀರ್ ಮೆದು, ಯಾಸಿರ್ ಮೊಂಟೆಪದವು

ಲೆಕ್ಕ ಪರಿಶೋಧಕ: ಅನ್ಸಾರ್ ಮುಹಮ್ಮದ್ ಉಳ್ಳಾಲ

ಸಂಚಾಲಕರು: ಝಹೀರ್ ಅಬ್ಬಾಸ್, ಇಸ್ಮಾಯಿಲ್ ಸುಟ್ಟ

ಆರ್ಗನೈಸಿಂಗ್ ಸೆಕ್ರೆಟರಿಗಳು: ಜೆ.ಫಾರೂಕ್ ಪಾಣೆಮಂಗಳೂರು, ಅಬ್ಬಾಸ್ ಬಂಡಸಾಲೆ

ಕಾರ್ಯಕಾರಿ ಸಮಿತಿ ಸದಸ್ಯರು:
ಅಬೂಬಕರ್ SM ಮೊಂಟೆಪದವು
ಶಮೀರ್ ಮುಹಮ್ಮದ್ ಉಳ್ಳಾಲ
ಅನ್ಸಾರ್ ಪಡಿಕ್ಕಲ್
ಆಸಿಫ್ ಸುಟ್ಟ
ನಿಝಾರ್ ಪಡಿಕ್ಕಲ್
ಶಿಹಾಬ್ ದೇರಳಕಟ್ಟೆ
ಸಂಶುದ್ದೀನ್ ಅಸೈಗೋಳಿ
ಅನ್ಸಾಫ್ ಮಲ್ಲೂರು.

error: Content is protected !! Not allowed copy content from janadhvani.com