ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಅಧೀನದಲ್ಲಿರುವ ಹಯ್ಯುಲ್ ಮುರೂಜ್ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಮಿತಿ ಅಧ್ಯಕ್ಷರಾದ PK ದಾವೂದ್ ಸಅದಿ ಉರುವಾಲು ಪದವು ಇವರ ಘನ ಅಧ್ಯಕ್ಷತೆಯಲ್ಲಿ ಜರುಗಿತು.
KCF ದಲ್ಲ ಯುನಿಟ್ ಅಧ್ಯಕ್ಷರಾದ ಯೂಸುಫ್ ಮುಸ್ಲಿಯಾರ್ ಚೆನ್ನಾರು ಸ್ವಾಗತಿಸಿದ ಸಭೆಯನ್ನು K P ಜಾಬಿರ್ ಕಳಂಜಿಬೈಲು ಖಿರಾಅತ್ ಪಠಿಸಿದರು.ಉದ್ಘಾಟನೆಯನ್ನು ಸಾಮಾಜಿಕ ಮುಂದಾಳು KCF ಮುರೂಜ್ ಸೆಕ್ಟರ್ ಕೋಶಾಧಿಕಾರಿ ಅಬ್ದುಲ್ ರಝಾಖ್ ಹಾಜಿ ಉಜಿರೆ ನೆರವೇರಿಸಿದರು.
”ಅಲೈಕುಮ್ ಬಿಲ್ ಜಮಾಅಃ” ಎಂಬ ಘೋಷ ವಾಕ್ಯದಲ್ಲಿ ಕೆ.ಸಿ.ಎಫ್. ಝೋನ್ ಶಿಕ್ಷಣದ ವಿಭಾಗದ ಚೆಯರ್ಮೇನ್ ಫಾರೂಕ್ ಸಅದಿ H ಕಲ್ಲು ವಿಷಯ ಮಂಡನೆ ನಡೆಸಿದರು.ಅಬ್ದುಲ್ ಮಜೀದ್ ಮುಡಿಪು ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ಚುಣಾವಣಾ ವೀಕ್ಷಕರಾಗಿ ಆಗಮಿಸಿದಂತ ಝೋನ್ ನಾಯಕರಾದ ಫಾರೂಕ್ ಸಅದಿ ಮತ್ತು ಝಹೀರ್ ಉಳ್ಳಾಲ ಇವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: PK ದಾವೂದ್ ಸಅದಿ ಉರುವಾಲು ಪದವು
ಪ್ರ.ಕಾರ್ಯದರ್ಶಿ: ಅಬ್ದುಲ್ ಮಜೀದ್ ಮುಡಿಪು
ಕೋಶಾಧಿಕಾರಿ: ಅಬ್ದುಲ್ ರಝಾಖ್ ಹಾಜಿ ಉಜಿರೆ
ಸಂಘಟನಾ ಇಲಾಖೆ
ಅಧ್ಯಕ್ಷರು: PK ಯಾಕುಬ್ ಮದನಿ ಉರುವಾಲು ಪದವು
ಕಾರ್ಯದರ್ಶಿ: ಕಬೀರ್ ಕೊದಾಲು ಸಾಲೆತ್ತೂರು
ಶಿಕ್ಷಣಾ ಇಲಾಖೆ ಅಧ್ಯಕ್ಷರು: KP ಜಾಬಿರ್ ಕಳಂಜಿಬೈಲು
ಕಾರ್ಯದರ್ಶಿ: ಶಕೀರ್ ಪದ್ಯಾನ ಕರೋಪಾಡಿ
ಸಾಂತ್ವನ ಇಲಾಖೆ ಅಧ್ಯಕ್ಷರು: BM ಅಬ್ದುಲ್ ಹಮೀದ್ ಮೂರುಗೋಳಿ
ಕಾರ್ಯದರ್ಶಿ: ಅಮೀರ್ ಮಾಣಿ
ಪಬ್ಲಿಷಿಂಗ್ ಇಲಾಖೆ ಅಧ್ಯಕ್ಷರು : ಸುಲೈಮಾನ್ ನೆಲ್ಯಾಡಿ
ಕಾರ್ಯದರ್ಶಿ: ಇಬ್ರಾಹಿಂ ಪಂಜಿಕಲ್ಲು ಕುಕ್ಕಾಜೆ
ಹಾಗೂ 24ಮಂದಿ ಕಾರ್ಯಕಾರಿ ಸಮಿತಿ ಮತ್ತು 5 ಮಂದಿ ಝೋನ್ ಕೌನ್ಸಿಲರ್ ಗಳನ್ನೊಳಗೊಂಡ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ನೂತನ ಕಾರ್ಯದರ್ಶಿ ಅಬ್ದುಲ್ ಮಜೀದ್ ವಂದಿಸಿದ ಸಭೆಯು 3 ಸ್ವಲಾತಿನೊಂದಿಗೆ ಕೊನೆಗೊಂಡಿತು.
ಪಬ್ಲಿಷಿಂಗ್ ಇಲಾಖೆ
ಕೆ.ಸಿ.ಎಫ್. ಹಯ್ಯುಲ್ ಮುರೂಜ್