ಅಬುಧಾಬಿ: ಮತ-ಭೌತಿಕ ಸಮನ್ವಯ ವಿದ್ಯಾಕೇಂದ್ರವಾದ ಮುಹಿಮ್ಮಾತುಲ್ ಮುಸ್ಲಿಮಿನ್ ಎಜುಕೇಶನ್ ಸೆಂಟರ್. ಪುತ್ತಿಗೆ ಕುಂಬಳೆ ಇದರ ಸನದುದಾನ ಸಮ್ಮೇಳನ ಮತ್ತು ತ್ವಾಹೀರ್ ತಂಙಳ್ ಅಂಡ್ ನೆರ್ಚೆಎಪ್ರಿಲ್ 12ರಿಂದ15ರ ತನಕ ನಡೆಯಲಿದೆ. ಇದರ ಪ್ರಯುಕ್ತ ಮುಹಿಮ್ಮಾತ್ ಅಬುಧಾಬಿ ಸಮಿತಿ ವತಿಯಿಂದ ಬ್ರಹತ್ ಪ್ರಚಾರ ಸಮ್ಮೇಳನ ಎಪ್ರಿಲ್ 5ರಂದು ಅಬುಧಾಬಿ ಸುಡಾನಿ ಸೆಂಟರ್ ನಲ್ಲಿ ನಡೆಯಲಿದೆ.
ಬಹು! ಅಸ್ಯೆಯ್ಯದ್ ಹಾಮೀದ್ ಅನ್ವರ್ ಅಹ್ದಲ್ ತಂಙಳ್ ದುಃಅ ಮತ್ತು ಆತ್ಮೀಯ ಮಜ್ಲೀಸ್ಗೆ ನೇತೃತ್ವ ನಿಡಲಿದ್ದಾರೆ.ಪ್ರಭಾಷಣ ಲೋಕದ ಮಿನುಗುತಾರೆ ಯುವ ವಾಗ್ಮಿ ಬಹು! ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಗ್ಯೆಯ್ಯಲಿದ್ದಾರೆ.ಅಲ್ಲದೆ ಹಲವಾರು ಧಾರ್ಮಿಕ ಹಾಗೂ ಸಮಾಜಿಕ ನೇತಾರರು ಭಾಗವಹಿಸಲಿದ್ದಾರೆ.
ಬುರ್ದಾಮತ್ತು ನಅ್ ತೆ ಅಲಾಪನೆ ನಡೆಯಲಿದೆ. ಎಂದು ಅಬುಧಾಬಿ ಸ್ವಾಗತ ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂದಾಪುರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.