ಮೀನುಗಾರರಿಂದ ಲೋಕಸಭೆ ಚುನಾವಣೆ ಬಹಿಷ್ಕಾರ

ಮಂಗಳೂರು, ಮಾ. 13- ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೀನುಗಾರರು ನಿರ್ಧರಿಸಿದ್ದಾರೆ. ಕಾಣೆಯಾದ  ಕಟುಬಂದ ಸದಸ್ಯರನ್ನು ಹುಡಕಿಕೊಡುವಲ್ಲಿ ಕೆಂದ್ರ ಮತ್ತು ರಾಜ್ಯಗಳ ನಿರಾಸಕ್ತಿಯನ್ನು ಪ್ರತಿಭಟಿಸಿ ಮೀನುಗಾರರು ಈ ಬಾರಿ ಚುನಾವಣೆ ಬಹಿಷ್ಕರಿಸಲು ತೀರ್ಮಾನ ಮಾಡಿದ್ದಾರೆ

ಕಳೆದ ವರ್ಷ ಡಿಸೆಂಬರ್ ನಲ್ಲಿ ಮಲ್ಪೆ ಬಂದರಿನ ಟ್ರಾವೆಲರ್ ಸುವರ್ಣ ತ್ರಿಭುಜ ದೋಣಿಯಲ್ಲಿ ಆಳವಾದ ಸಮುದ್ರಕ್ಕೆ ತೆರಳಿದ್ದ ಕೆಲವು ಮೀನುಗಾರರು ಕಾಣೆಯಾಗಿ 88 ದಿನಗಳು ಕಳೆದರೂ ಅವರು ಎಲ್ಲಿದ್ದಾರೆ ಎಂಬದು ಗೊತ್ತಿಲ್ಲ. ಕಟುಬಂದ ಸದಸ್ಯರು ಕಷ್ಟದಲ್ಲಿ ಇರಿವಾಗ ನಾವು ಯಾವ ರೀತಿ ಮತದಾನದಲ್ಲಿ  ತೊಡಗಲು ಸಾದ್ಯ ಎಂದು ಅವರು ಪ್ರಶ್ನೆ  ಮಾಡಿದ್ದಾರೆ

ಕೇಂದ್ರವಾಗಲಿ ಇಲ್ಲ  ರಾಜ್ಯವಾಗಲಿ ನಮ್ಮ ಕುಟುಂಬದ ನೆರವಿಗೆ ಬಂದಿಲ್ಲ ತಮ್ಮ ದುಃಖ ಕೇಳಲು ಯಾರು ಇಲ್ಲದಿರುವಾಗ ನಾವು ಮತದಾನದಲ್ಲಿ ಹೇಗೆ ನೆಮ್ಮದಿಯಿಂದ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಮೀನುಗಾರರು ತಮ್ಮ ಆತಂಕ ವ್ಯಕ್ತಪಡಿಸಿದ್ದರೆ.

ಈ ಘಟನೆಯು ಬೆಳಕಿಗೆ ಬಂದ ತಕ್ಷಣ, ನೌಕಾಪಡೆ, ಕೋಸ್ಟ್ ಗಾರ್ಡ್ ವರ್ ಸೇರಿದಂತೆ ಹಲವಾರು ಸಂಸ್ಥೆಗಳು ಕಾಣೆಯಾದ ಮೀನುಗಾರರನ್ನು ಪತ್ತೆ ಮಾಡಲು ಅವಿತರವಾಗಿ ಶ್ರಮಿಸಿದ್ದರೂ ಅದು ಫಲ ಕೊಟ್ಟಿಲ್ಲ. ಕಾಣೆಯಾದ ಮೀನುಗಾರರು ಏಲ್ಲಿದ್ದಾರೆ. ಹೇಗಿದ್ದಾರೆ ಎಂಬ ಖಚಿತ ಮತ್ತು ಅಧಿಕೃತ ಮಾಹಿತಿಯು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮೀನುಗಾರರು ಆಕ್ರೋಶಗೊಂಡಿದ್ದಾರೆ. ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಮೀನುಗಾರರ ಸಂಘವು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನನ್ನು ಭೇಟಿ ಮಾಡಿದೆ ಮತ್ತು ಕಾಣೆಯಾದ ಮೀನುಗಾರರನ್ನು ಹುಡುಕಿಕೊಡುವಂತೆ ಮನವಿ ಮಾಡಿದೆ. ಆದರೆ, ಇಲ್ಲಿವರೆಗೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿವೆ. ಕಾಣೆಯಾದ ಮೀನುಗಾರರನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!