janadhvani

Kannada Online News Paper

ಸುರತ್ಕಲ್ SSF ಸೆಕ್ಟರ್ ವತಿಯಿಂದ ರಕ್ತ ದಾನ ಶಿಬಿರ

ಸುರತ್ಕಲ್: SSF ದ.ಕ.ಜಿಲ್ಲಾ Blood Saibo ಇದರ 57ನೇ ರಕ್ತದಾನ ಶಿಬಿರವು SSF ಸುರತ್ಕಲ್ ಸೆಕ್ಟರ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜೋಕಟ್ಟೆಯಲ್ಲಿ ನಡೆಯ್ತು.

ಮಂಗಳೂರು ಕೆ.ಯಂ.ಸಿ. ಆಸ್ಪತ್ರೆಯ ಸಹಯೋಗದೊಂದಿಗೆ, ಜೋಕಟ್ಟೆ ಯೂನಿಟ್ ನ ತುಂಬು ಸಹಕಾರ ದೊಂದಿಗೆ ಸುಮಾರು 61 ಯೂನಿಟ್ ರಷ್ಟು ರಕ್ತ ಸಂಗ್ರಹವಾಗುವುದರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿತ್ತು.

ಬೆಳಿಗ್ಗೆ 9:30 ಗಂಟೆಗೆ ಸುರತ್ಕಲ್ ಡಿವಿಶನ್ ಅಧ್ಯಕ್ಷರಾದ ಬಹು ಉಮರುಲ್ ಫಾರೂಖ್ ಸಖಾಫಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.SSF ಸುರತ್ಕಲ್ ಸೆಕ್ಟರ್ ರಕ್ತದಾನ ಶಿಬಿರದ ಚೇರ್’ಮಾನ್ ಬಹು ಬಶೀರ್ ಹಿಮಮಿ ಸಖಾಫಿ ಜೋಕಟ್ಟೆ ಸ್ವಾಗತಿಸಿದರು.ಬಹು ಫಾರೂಖ್ ಸಖಾಫಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ತದಾನ ಮಾಡುವ ಮೂಲಕ ನಮ್ಮ ಸೇವೆ ಮುಂದುವರಿಸಬೇಕೆಂದು ಉಪದೇಶ ನೀಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸದಸ್ಯರು ಜನಾಬ್ ಬಿ.ಯಸ್.ಬಶೀರ್ ಅಹ್ಮದ್ ಜೋಕಟ್ಟೆ, KPCC ಕರಾವಳಿ ವಲಯ Minority Co-ordinator ಆಗಿರುವ ಜನಾಬ್ ಮುಹಮ್ಮದ್ ಹನೀಫ್ ಜೋಕಟ್ಟೆ, 62ನೇ ತೋಕೂರು ಜೋಕಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಜನಾಬ್ ಶಂಸುದ್ದೀನ್ , ಮುಹ್ಯುದ್ದೀನ್ ಹಳೇ ಜುಮುಅಃ ಮಸ್ಜಿದ್ ಅಧ್ಯಕ್ಷರು ಜನಾಬ್ ಮೊಯ್ದೀನ್ ಶರೀಫ್, ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರು ಜನಾಬ್ ಸಿರಾಜ್ ಮನೆಗಾರ, SMA ಮಂಗಳೂರು ರೀಜನಲ್ ಕಾರ್ಯದರ್ಶಿ ಜನಾಬ್ ಉಮರುಲ್ ಫಾರೂಖ್ ಶೇಡಿಗುರಿ, SSF ದ.ಕ.ಜಿಲ್ಲೆಯ ಉಪಾಧ್ಯಕ್ಷರು ಬಹು! ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ, SSF ದ.ಕ.ಜಿಲ್ಲೆಯ ಸದಸ್ಯರು ಹಾಗೂ ಉಳ್ಳಾಲ ಡಿವಿಶನ್ ಅಧ್ಯಕ್ಷರು ಆದ ಸೈಯ್ಯಿದ್ ಖುಬೈಬ್ ತಂಙಳ್, SSF ದ.ಕ.ಜಿಲ್ಲೆಯ ಸದಸ್ಯರು ಉಳ್ಳಾಲ ಡಿವಿಶನ್ ಉಸ್ತುವಾರಿಯಾದ ಆರಿಫ್ ಝುಹ್’ರಿ ಮುಕ್ಕ, SSF ದ.ಕ.ಜಿಲ್ಲೆಯ ಜೊತೆ ಕಾರ್ಯದರ್ಶಿ ರಫೀಖ್ 3ನೇ ಬ್ಲಾಕ್, ಜೋಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದರ ಆಡಳಿತ ಸಮಿತಿ ಅಧ್ಯಕ್ಷ ಜನಾಬ್ ಬಾವಾಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ SSF ದ.ಕ.ಜಿಲ್ಲೆ Blood Saibo ಇದರ ಮುಖ್ಯ ರೂವಾರಿಯಾದ ಇಬ್ರಾಹೀಂ ಕರೀಂ ಕದ್ಕಾರ್, ಬೋಳಂತೂರು ಮತ್ತು SSF ಸುರತ್ಕಲ್ ಡಿವಿಶನ್ ಪ್ರಧಾನ ಕಾರ್ಯದರ್ಶಿಯೂ, ರಕ್ತ ಪೂರೈಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಹೈದರ್ 4ನೇ ಬ್ಲಾಕ್ ರವರನ್ನೂ ಈ ಸಂದರ್ಭದಲ್ಲಿ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ರಕ್ತದಾನ ಶಿಬಿರಕ್ಕಾಗಿ ಕಠಿಣ ಪರಿಶ್ರಮ ಮಾಡಿದ SSF ಸುರತ್ಕಲ್ ಸದಸ್ಯರಾದ ಮುಸ್ತಫಾ ಕೆ.ಸಿ.ಎಫ್ ಸುರತ್ಕಲ್, ಜೋಕಟ್ಟೆ ಯೂನಿಟ್ ಕಾರ್ಯಕರ್ತರು ಹಾಗೂ ಸೆಕ್ಟರ್ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ, SSF Jokatte Unit ಮಾಜಿ ಅಧ್ಯಕ್ಷರು ಉಸ್ಮಾನ್ ಸಖಾಫಿ, ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಈಲ್, ಮಾಜಿ ಪ್ರಧಾನ ಕಾರ್ಯದರ್ಶಿ ಸಮ್ರಾನ್ ಮುಂತಾದವರಿಗೆ ಇದೇವೇದಿಕೆಯಲ್ಲಿ ಟ್ರೋಫಿ ನೀಡುವುದರೊಂದಿಗೆ, SSF Surathkal ಡಿವಿಶನ್ ಖಜಾಂಜಿ ಜನಾಬ್ ರಿಝ್ವಾನ್ ರವರಿಗೆ ಮತ್ತು ಸುರತ್ಕಲ್ ನ’ಈಂ ಮತ್ತು ಸುರತ್ಕಲ್ ಕ್ರಾಸ್ ತೌಸೀಫ್ ರವರಿಗೂ ಕಿರು ಕಾಣಿಕೆ-ಮೊಮೆಂಟೊ SSF D.K Dist ಮತ್ತು ಸುರತ್ಕಲ್ ಡಿವಿಶನ್, ಸೆಕ್ಟರ್ ನಾಯಕರಿಂದ ನೀಡಿ ಗೌರವಿಸಲಾಯಿತು.
ಜೋಕಟ್ಟೆ ಶಾಖೆಯ ಅಧ್ಯಕ್ಷರು ಬ್ಲಡ್ ಕ್ಯಾಂಪ್ ಚೇರ್ಮೆನ್ ಇವರನ್ನು ಕೂಡಾ ಶಾಲುಹೊದಿಸಿ ಸನ್ಮಾನಿಸಲಾಯಿತು.

ರಕ್ತದಾನಿಗಳಾಗಿ ಅಡ್ಕಾ, ಬೈಕಂಪಾಡಿ ಇಮಾಂ ಸಅದಿ, ತೋಕೂರು ಅಲೀ ಸಅದಿ, ಪೇರ ಇಮಾಂ ಅಂಜದಿ, ಸುರತ್ಕಲ್ ಜಮಾಅತ್ ಸಮಿತಿಯವರು, ಜೋಕಟ್ಟೆ ಯ ಆಝಾದ್ ಕಾರ್ಯಕರ್ತರು ಭಾಗವಹಿಸಿದರು, ಶೇಡಿಗುರಿಯ ಹಿಂದೂ ಬಾಂಧವರು ಕೂಡ ಭಾಗವಹಿಸಿದರು.

ವರದಿ: ಬಶೀರ್ ಹಿಮಮಿ ಅಸ್ಸಖಾಫಿ ಜೋಕಟ್ಟೆ(ಚೇರ್ಮೆನ್ ಬ್ಲಡ್ ಕ್ಯಾಂಪ್)

error: Content is protected !! Not allowed copy content from janadhvani.com