janadhvani

Kannada Online News Paper

ಮಾರ್ಚ್ 14 ಗುರುವಾರ ಮಾಣಿ ದಾರುಲ್ ಇರ್ಶಾದ್ ಅಜ್ಮೀರ್ ಮೌಲಿದ್

ಮಾಣಿ : ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ ಇದರ ವತಿಯಿಂದ ಪ್ರತೀವರ್ಷವೂ ನಡೆಯುವ ಅಜ್ಮೀರ್ ಮೌಲಿದ್,ಏರ್ವಾಡಿ ಶುಹದಾ ನೇರ್ಚೆ,ಖತಮುಲ್ ಕುರ್’ಆನ್ ಮತ ಪ್ರಭಾಷಣ ಕಾರ್ಯಕ್ರಮವು ಮಾರ್ಚ್ 14 ಗುರುವಾರದಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಿತ್ತೂರು ಕೆಜಿಎನ್ ವಿದ್ಯಾಲಯದಲ್ಲಿ ನಡೆಯಲಿದೆ.

ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್,ಝೈನುಲ್ ಉಲಮಾ ಮಾಣಿ ಉಸ್ತಾದ್,ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್, ಮುಂತಾದ ಹಲವಾರು ಉಲಮಾ ಉಮರಾ ಸಾದಾತುಗಳು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಶೈಖುನಾ ಪೇರೋಡ್ ಅಬ್ದರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿರುವರು ಎಂದು ಪ್ರಚಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com