ಕೆ.ಸಿ.ಎಫ್ ನೂತನ ಹರಮ್ ಯುನಿಟ್ ಅಸ್ತಿತ್ವಕ್ಕೆ

ಜಿದ್ದಾ: ಕೆ.ಸಿ.ಎಫ್ ಜಿದ್ದಾ ಝೋನಿನ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿ ನೂತನ ಹರಮ್ ಯುನಿಟ್ ರಚನೆ ಹಾಗೂ ಆತ್ಮೀಯ ಮಜ್ಲಿಸ್ ಸೆಕ್ಟರ್ ಅಧ್ಯಕ್ಷರಾದ ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಹರಮ್ ಶರೀಫ್ ನ ಮುಂಬಾಗದಲ್ಲಿರುವ ಕ್ಲಾಕ್ ಟವರ್ ನ 3 ನೇ ಮಹಡಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮರ್ಕಝ್ ಮಾರ್ಟ್ ಉಮ್ರಾ ಟ್ರಾವೆಲ್ಸ್ ಇದರ ಅಮೀರ್ ಹಾಗೂ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸದಸ್ಯರಾದ ಅಬ್ದುಲ್ ಅಝೀಝ್ ಹನೀಫಿ ಕಾಯಾರ್ ಉದ್ಘಾಟಿಸಿ ಮಾತಾಡಿ, ಮಕ್ಕಾ ಕೆಸಿಎಫ್ ಸೌದಿ ಅರೇಬಿಯಾ ಕೆ.ಸಿ.ಎಫ್ ನ ಅಭಿಮಾನವಾಗಿದೆ, HVC ನಲ್ಲಿ ಹಜ್ಜಾಜಿಗಳ ಸೇವೆ ಮಾಡಲು ಈ ಹರಮ್ ಯುನಿಟ್ ರೂಪೀಕರಣವು ಇನ್ನಷ್ಟು ಮಾದರಿಯಾಗಲಿ, ಎಲ್ಲರಿಗೂ ಈ ಯುನಿಟ್ ರಚನೆಯ ವಿಷಯ ತಿಳಿದು ತುಂಬಾ ಸಂತೋಷವಾಗಿದೆ ಎಂದರು.

ಕೆಸಿಎಫ್ ನಲ್ಲಿ ಹೇಗೆ ಕಾರ್ಯಚರಿಸಬೇಕು, ಕೆಸಿಎಫ್ ನ ಮಹತ್ವ ಇನ್ನಿತರ ವಿಷಯವನ್ನು ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂತರ ಸೆಕ್ಟರ್ ನಿಂದ R.O ಆಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಅಶ್ರಫ್ ಮಂಜನಾಡಿ, ಪ್ರ.ಕಾರ್ಯದರ್ಶಿ ಮುಜೀಬುರ್ರಹ್ಮಾನ್ ಹರೇಕಳ, ಕೋಶಾಧಿಕಾರಿ ನವಾಝ್ ಉಚ್ಚಿಲ್, ಉಪಾಧ್ಯಕ್ಷರುಗಳಾಗಿ ಬಶೀರ್ ಮದನಿ ಬಂಟ್ವಾಳ, ಅಬ್ದುಲ್ ರಝ್ಝಾಖ್ ತೆಕ್ಕಾರ್. ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಬಂಗ್ಲೆಗುಡ್ಡೆ, ಅಬ್ದುಲ್ ಗಫೂರ್ ಉಚ್ಚಿಲ್. ಕಾರ್ಯಕಾರಿ ಸದಸ್ಯರಾಗಿ ಸಿರಾಜುದ್ದೀನ್ ವಳವೂರು, ಅಬ್ದುಲ್ ರಹ್ಮಾನ್ ಪುಚ್ಚಮೊಗರು, ಶರೀಫ್ ಕೂಳೂರು, ಆರೀಫ್ ನಾವೂರು ರವರನ್ನೊಳಗೊಂಡ 11 ಕಾರ್ಯಕರ್ತರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

ಸೆಕ್ಟರ್ ಕಾರ್ಯಕಾರಿ ಸದಸ್ಯರಾದ ಅಬ್ದುಲ್ ಹಮೀದ್ ಮಂಜನಾಡಿ ಶುಭ ಹಾರೈಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಸೆಕ್ಟರ್ ಅಡ್ಮಿನ್ ವಿಭಾಗ ಕಾರ್ಯದರ್ಶಿ ಕಲಂದರ್ ಶಾಫಿ ಸ್ವಾಗತಿಸಿ, ನೂತನ ಪ್ರ. ಕಾರ್ಯದರ್ಶಿ ಮುಜೀಬುರ್ರಹ್ಮಾನ್ ಹರೇಕಳ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!